ಸುಶಾಂತ್ ಸಾವಿನ ಬಳಿಕ ಅನೇಕ ಸೆಲೆಬ್ರಿಟಿಗಳ ವಿರುದ್ಧ ನೇರಾನೇರ ಆರೋಪ ಮಾಡುತ್ತಲೇ ಬಂದಿರುವ ಕಂಗನಾ ಇದೀಗ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ . ಸುಶಾಂತ್ ಸಿಂಗ್ ಅವರೊಂದಿಗೆ ಅಭಿನಯಿಸದೇ ಇರಲು ಕಾರಣ ಹೃತಿಕ್ ರೋಷನ್ ಎಂದು ಸಂದರ್ಶನವೊಂದರಲ್ಲಿ ಕಂಗಾನಾ ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.ಹೌದು ಸುಮಾರು 2-3 ವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ಹೃತಿಕ್ ಹಾಗೂ ಕಂಗಾನಾ ನಡುವಿನ ಕಿತ್ತಾಟ ಜೋರಾಗಿತ್ತು. ಹೃತಿಕ್ ರೋಷನ್ ವಿರುದ್ಧ ಕಂಗನಾ ಆರೋಪಗಳ ಸುರಿಮಳೆಗಳನ್ನೇ ಸುರಿಸಿದ್ರು. ಅಷ್ಟೇ ಅಲ್ದೇ ಇವರಿಬ್ಬರ ನಡುವಿನ ಜಗಳ ಕೋರ್ಟ್ ಅಂಗಳ ತಲುಪಿತ್ತು. ಕಂಗಾನಾ ಆರೋಪಗಳಿಗೆ ಪ್ರತಿಯಾಗಿ ಹೃತಿಕ್ ಲೀಗಲ್ ನೋಟಿಸ್ ಕಳುಹಿಸಿದ್ದೂ ಉಂಟು. 
ಈ ಬಗ್ಗೆ ಇತ್ತೀಚೆಗೆ ಮನದಾಳದ ಮಾತುಬಿಚ್ಚಿಟ್ಟ ಕಂಗನಾ ಹೋಮಿ ಅಡ್ಜಾನಿಯಾ ಅವರ ನಿರ್ದೇಶನದ ಚಿತ್ರಕ್ಕೆ ಸುಶಾಂತ್ ಸಿಂಗ್ ಜೊತೆ ಬಣ್ಣಹಚ್ಚುವ ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ಹೃತಿಕ್ ರೋಷನ್ ಅವರು ನನಗೆ ಲೀಗಲ್ ನೊಟಿಸ್ ಕಳುಹಿಸಿದ್ದರು. ನನಗೆ ಆಗ ಮಾನಸಿಕ ಒತ್ತಡಗಳು ಹೆಚ್ಚಾಗಿದ್ದ ಕಾರಣ ನಾನು ಸಿನೆಮಾಗೆ ಒಪ್ಪಿರಲಿಲ್ಲ. ಅಲ್ಲದೇ ಇದೇ ಜಂಜಾಟಗಳಿಂದ 1 ವರ್ಷ ಯಾವುದೇ ಚಿತ್ರದಲ್ಲೂ ಅಭಿನಯಿಸಲಿಲ್ಲ ಎಂದು ಹೆಳಿಕೊಂಡಿದ್ದಾರೆ.







