ಮುಂಬೈ : ಸೆಟ್ ನಲ್ಲಿ ಎ ಲೀಸ್ಟ್ ನಟ, ನಿರ್ದೇಶಕರೊಂದಿಗೆ ನಾವು ಹೆಂಡ್ತೀರ ರೀತಿ ವರ್ತಿಸಬೇಕು ಎಂದು ನಟಿ ಕಂಗನಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಕಂಗನಾ, ಕಾಸ್ಟಿಂಗ್ ಕೌಚ್ ಮತ್ತು ಮಹಿಳೆಯರ ಮೇಲಿನ ಒತ್ತಡದ ಬಗ್ಗೆ ಮತನಾಡಿದ್ದಾರೆ.
ನಟಿಯರು ಸಿನಿಮಾದಲ್ಲಿ ಸಕ್ಸಸ್ ಆಗಬೇಕೆಂದರೇ ಅಥವಾ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಾಗಿದ್ದರೇ ಅವರು ನಟ / ನಿರ್ದೇಶಕರನ್ನು ಸಂತೋಷಪಡಿಸಬೇಕಾಗುತ್ತದೆ.
‘ಅನೇಕ ಸ್ಟಾರ್ ನಟರು, ಬಿಗ್ ಸೂಪರ್ಸ್ಟಾರ್ಗಳು ಮತ್ತು ನಿರ್ದೇಶಕರು ಚಿತ್ರದ ಸೆಟ್ ಗಳಲ್ಲಿ ನಟಿಯರನ್ನು ಹೆಂಡತಿಯಂತೆ ನೋಡಲು ಬಯಸುತ್ತಾರೆ.
ಆದ್ದರಿಂದ ನಾವು ಅವರ ಪತ್ನಿಯರಂತೆ ವರ್ತಿಸಬೇಕು. ಆಗ ಮುಂದಿನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ.
ಇದು ಉದ್ಯಮದ ಸತ್ಯ ಎಂದು ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.