ನಾನು ನಂಬುವುದಾದರೆ ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು – ಕಂಗಾನ ರಣಾವತ್.
ನಟ ಕಿಚ್ಚ ಸುದೀಪ್ ಹಿಂದಿ ಭಾಷೆಗೆ ಸಂಬಂಧಿಸಿದಂತೆ ನೀಡಿದ ಹಿಂದಿ ರಾಷ್ಟ್ರ ಭಾಷೆಯ ಎಂಬ ಹೇಳಿಕೆ ಇಡೀ ಭಾರತೀಯ ಚಿತ್ರರಂಗದ ಚರ್ಚೆಗೆ ಗ್ರಾಸವಾಗಿದೆ. ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂಬ ರಿಪ್ಲೆಗೆ ಕಿಚ್ಚನ ಆದಿಯಾಗಿ ದಕ್ಷಿಣದ ಎಲ್ಲರೂ ಸರಿಯಾದ ಪ್ರತ್ಯುತ್ತರವನ್ನೇ ನೀಡಿದ್ದಾರೆ. ಮನೋಜ್ ಬಾಜ್ಪೇಯಿ ಮತ್ತು ನವಾಜುದ್ದೀನ್ ಸಿದ್ದಿಕಿ ಅಂಥವರು ಸಹ ದಕ್ಷಿಣದ ಸಿನಿಮಾ ಇಂಡಸ್ಟ್ರಿಯನ್ನ ಬೆಂಬಲಿಸಿದ್ದಾರೆ. ಈ ವಿವಾದಕ್ಕೆ ಕಂಗನಾ ರಣಾವತ್ ಹೆಸರೂ ಸಹ ಹೊಸದಾಗಿ ಸೇರ್ಪಡೆಯಾಗಿದೆ.
ಧಡಕ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಕಂಗಾನ ಸಂವಿಧಾನವು ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಆಯ್ಕೆ ಮಾಡಿದೆ ಮತ್ತು ನಾವು ಅದನ್ನು ಗೌರವಿಸಬೇಕು ಎಂದು ಹೇಳಿದರು. ನಾನು ನಂಬುವುದಾದರೆ ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದು ಹೇಳಿದ್ದಾರೆ.
ಇಡೀ ವಿವಾದದ ಬಗ್ಗೆ ಮಾತನಾಡಿದ ಕಂಗನಾ, “ನಮ್ಮಲ್ಲಿರುವ ಈ ವ್ಯವಸ್ಥೆ ಮತ್ತು ಸಮಾಜದಲ್ಲಿ ಹಲವು ರೀತಿಯ ಜನರಿದ್ದಾರೆ. ವಿಭಿನ್ನ ಸಂಸ್ಕೃತಿಗಳು, ಸಂಬಂಧಗಳು ಮತ್ತು ಭಾಷೆಗಳಿವೆ. ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು. ನಾನು ಪಹಾರಿಯಾಗಿರುವುದರಿಂದ ನನ್ನ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನಮ್ಮ ದೇಶವು ಸಂಪೂರ್ಣ ಘಟಕವಾಗಿದೆ. ನಮಗೆಲ್ಲರಿಗೂ ಸಂಪರ್ಕಕ್ಕಾಗಿ ಒಂದು ಭಾಷೆ ಬೇಕು ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು ಮತ್ತು ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಿದೆ. ಹಾಗೆ ನೋಡಿದರೆ ತಮಿಳು ಹಿಂದಿಗಿಂತ ಹಳೆಯದು. ಆದರೆ ಸಂಸ್ಕೃತ ಅದಕ್ಕಿಂತ ಹಳೆಯದು. ನೀವು ನನ್ನನ್ನು ನಂಬಿದರೆ, ಸಂಸ್ಕೃತವು ರಾಷ್ಟ್ರ ಭಾಷೆಯಾಗಬೇಕು ಎಂದು ನಾನು ಭಾವಿಸುತ್ತೇನೆ. ಎಂದು ಕಂಗಾನ ಹೇಳಿದ್ದಾರೆ.
ಕನ್ನಡ, ತಮಿಳು, ಗುಜರಾತಿ ಮತ್ತು ಹಿಂದಿ ಎಲ್ಲವೂ ಈ ಸಂಸ್ಕೃತದಿಂದ ಬಂದಿವೆ ಎಂದು ಕಂಗನಾ ಹೇಳಿದರು. ಸಂಸ್ಕೃತವನ್ನು ಮಾಡದೆ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದ್ದು ಏಕೆ? ಆದರೂ ನನ್ನ ಬಳಿ ಉತ್ತರವಿಲ್ಲ. ಇದು ಆ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳು ಎಂದು ಕಂಗಾನ ತನ್ನ ಅಭಿಪ್ರಾಯ ಹೇಳಿದ್ದಾರೆ.