ಬಾಲಿವುಡ್ ನ ಡೇರಿಂಗ್ ನಟಿ ಅಂತಲೇ ಕರೆಸಿಕೊಳ್ಳುವ ಕಂಗನಾ ರಣಾವತ್ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಸುಶಾಂತ್ ಸಾವಿನ ನಂತರ ಬಾಲಿವುಡ್ ನ ಕರ್ಮಾಕಾಂಡ ಬಯಿಲಿಗೆಳೆಯುತ್ತಿರುವ ಕಂಗನಾ ಇದೀಗ ನಿಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ.
ಹೌದು ಈ ಹಿಂದೆ ಎರಡು ರಾಷ್ಟ್ರೀಯ ಪಕ್ಷಗಳು ನನಗೆ ಚುನಾವಣಾ ಟಿಕೆಟ್ ನೀಡಲು ಮುಂದಾಗಿದ್ದವು. ಆದರೆ ನಾನು ತಿರಸ್ಕರಿಸಿದ್ದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಕಾಂಗ್ರೆಸ್ ಮತ್ತು ಮಣಿಕರ್ಣಿಕಾ ಚಿತ್ರದ ನಂತರ ಬಿಜೆಪಿ ಪಕ್ಷವೂ ನನಗೆ ಚುನಾವಣಾ ಟಿಕೆಟ್ ನೀಡಲು ಮುಂದಾಗಿದ್ದವು. ಆದರೆ ನನಗೆ ರಾಜಕೀಯಕ್ಕೆ ಸೇರುವ ಬಗ್ಗೆ ಯಾವುದೇ ಆಲೋಚನೆಗಳಿಲ್ಲ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ.








