‘ಗಂಗೆಯಲ್ಲಿ ಹೆಣಗಳು ತೇಲಿಬರುತ್ತಿರುವ ಚಿತ್ರಗಳು ಫೇಕ್ … ಇದು ನಮ್ಮ ದೇಶದ್ದಲ್ಲ ನೈಜೀರಿಯಾದ್ದು’ – ಕಂಗನಾ
ಸದಾ ಕಾಂಟ್ರವರ್ಸಿ ಮೂಲಕವೇ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಗೆ ಇತ್ತೀಚೆಗೆ ಟ್ವಿಟ್ಟರ್ ಶಾಶ್ವತವಾಗಿ ಗೇಟ್ ಪಾಸ್ ಕೊಟ್ಟಿದೆ.. ಇದಾದ ನಂತರ ನಟಿ ಇನ್ಸ್ಟಾ ಹಾಗೂ ಕೂ ಆಪ್ ನಲ್ಲಿ ಸಕ್ರಿಯರಾಗಿದ್ದಾರೆ. ಕಂಗನಾ ನೀಡುವ ಹೇಳಿಕೆಗಳು ಬಿಜೆಪಿ ಪರ ಿರುತ್ತೆ.. ಹೀಗಾಗಿ ಅನೇಕರು ಕಂಗನಾರನ್ನ ಟ್ರೋಲ್ ಮಾಡ್ತಾರೆ..
ಇತ್ತೀಚೆಗೆ ಗಂಗಾ ನದಿಯಲ್ಲಿ ಮೃತದೇಹಗಳು ತೇಲಿಬರುತ್ತಿದ್ದು, ಇವು ಕೋವಿಡ್ ಸೋಂಕಿತರದ್ದು ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಈ ಸಂಬಂಧ ಮತ್ತೊಂದು ಪೋಸ್ಟ್ ಹಾಕಿ ಸುದ್ದಿಯಲ್ಲಿದ್ದಾರೆ.
ಗಂಗಾ ನದಿಯಲ್ಲಿ ಹೆಣಗಳು ತೇಲಿಬರುತ್ತಿರುವ ವಿಡಿಯೋಗಳು, ಚಿತ್ರಗಳು ಎಲ್ಲೆಡೆ ಹರಿದಾಡುತ್ತಿವೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೆಣಗಳು ಎಲ್ಲಿಂದ ಬರುತ್ತಿವೆ. ಯಾರು ಬಿಸಾಡುತ್ತಿದ್ದಾರೆಂಬ ತನಿಖೆಗೆಂದು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ದಳವನ್ನು ರಚಿಸಿದೆ.
ಇದೇ ವಿಚಾರವಾಗಿ ಮಾತನಾಡುತ್ತಾ ತಮ್ಮ ಹಳೆಯ ಚಾಳಿ ಮುಂದುವರೆಸಿರುವ ಕಂಗನಾ, ಗಂಗಾ ನದಿಯಲ್ಲಿ ಹೆಣಗಳು ತೇಲುತ್ತಿರುವ ಚಿತ್ರಗಳು, ವಿಡಿಯೋ ಭಾರತದಲ್ಲ ಅದು ನೈಜೀರಿಯಾ ದೇಶದ್ದು ಎಂದಿದ್ದಾರೆ. ಭಾರತವನ್ನು ಕಳಪೆಯಾಗಿ ತೋರಿಸಲು ಹಲವರು ಪಿತೂರಿ ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನ ಮಾಡಲು ನಮ್ಮವರೇ ಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಆಮ್ಲಜನಕ ಮಾಸ್ಕ್ ಮುಖಕ್ಕೆ ಹಾಕಿಕೊಂಡಿರುವ ರಸ್ತೆಯಲ್ಲಿ ಕುಳಿತ ಮಹಿಳೆಯ ಚಿತ್ರ ವಿಪರೀತ ಹರಿದಾಡಿತ್ತು. ಆದರೆ ಅದು ಕೊರೊನಾ ಸಮಯದ್ದಲ್ಲ ಎಂಬುದು ಆಮೇಲೆ ಪತ್ತೆಯಾಗಿದೆ. ಈಗ ಗಂಗೆಯಲ್ಲಿ ಹೆಣಗಳು ತೇಲುತ್ತಿವೆ ಎನ್ನಲಾಗುತ್ತಿದೆ. ಆದರೆ ಆ ಚಿತ್ರಗಳು ನೈಜೀರಿಯಾದ್ದು ಎಂದು ಗೊತ್ತಾಗಿದೆ ಎಂದಿದ್ದಾರೆ
ಕೆಲವು ಜನ ಭಾರತೀಯರೇ ಭಾರತದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಭಾರತಕ್ಕೆ ಅವಮಾನ ಆಗುವಂಥಹಾ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಇವರಿಗೆ ಮೊದಲು ಬುದ್ಧಿ ಕಲಿಸಬೇಕು. ಇಸ್ರೇಲ್ ರೀತಿ ಭಾರತದ ಎಲ್ಲರೂ ಸೈನ್ಯದಲ್ಲಿ ಕೆಲಸ ಮಾಡುವುದನ್ನು ಕಡ್ಡಾಯ ಮಾಡಬೇಕು. ನಮ್ಮ ಧರ್ಮದ ಜನ ಬಿಟ್ಟು ಉಳಿದವರೆಲ್ಲರೂ ವ್ಯರ್ಥ ಎಂದು ಸಾರುವ ಧರ್ಮಗಳನ್ನು ರದ್ದು ಮಾಡಬೇಕು ಎಂದಿದ್ದಾರೆ ಕಂಗನಾ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.