ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಂಗನಾಳನ್ನ ಝಾಂಸಿರಾಣಿ ಲಕ್ಷ್ಮೀಬಾಯಿ ರೀತಿಯಲ್ಲೇ ಕೆಲವರು ವರ್ಣಿಸುತ್ತಿದ್ದಾರೆ. ಕಂಗನಾ ಧೈರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅನೇಕರು ಕಂಗನಾ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಗುಜರಾತಿನ ವ್ಯಾಪಾರಿಯೊಬ್ಬರು ಕಂಗನಾಳಿಗೆ ವಿಶೇಷ ರೀತಿಯಲ್ಲಿ ಬೆಂಬಲ ತೋರಿದ್ದಾರೆ.
ವ್ಯಾಪಾರಿ ರತನ್ ಎಂಬುವವರು ಕಂಗನಾ ಹೆಸರಿನಲ್ಲಿ ಸೀರೆ ಸಿದ್ಧಪಡಿಸುತ್ತಿದ್ದಾರೆ. ಸೀರೆ ಮೇಲೆ ಕಂಗನಾ ಫೋಟೋ ಇದೆ. ಜೊತೆಗೆ ಝಾನ್ಸಿ ರಾಣಿ ಮಣಿಕರ್ಣಿಕಾ. ಕಂಗನಾ ನಾನು ನಿಮಗೆ ನಮಸ್ಕರಿಸುತ್ತೇವೆಂಬ ಬರಹವಿದೆ.
ಕಂಗನಾ ಫೋಟೋ ಇರುವ ಈ ಸೀರೆಗೆ ಕಂಗನಾ ರೌತಲ್ ಫೆಬ್ರಿಕ್ ಸಾರಿ ಎಂದು ಹೆಸರಿಡಲಾಗಿದೆ. ಈ ಸೀರೆ ಬೆಲೆ 1 ಸಾವಿರ ರೂಪಾಯಿಯಿಂದ ಶುರುವಾಗಲಿದ್ದು, ಸೀರೆಗೆ ಬೇಡಿಕೆಯೂ ಹೆಚ್ಚಾಗಿದೆ.








