“ನಾನು ಬಿಟ್ಟಿದ್ದನ್ನು ಕೊಡಿ ಎಂದು ನಿರ್ಮಾಪಕರ ಬಳಿ ಬೇಡುತ್ತಿದ್ದ ಬಿ ಗ್ರೇಡ್ ನಟಿ ತಾಪ್ಸಿ” – ಕಂಗನಾ ಕಿಡಿ
ಕಂಗನಾ ರಣೌತ್… ಈ ಹೆಸರು ಇದೀಗ ಕೇವಲ ಬಾಲಿವುಡ್ ಅಂಗಳದಲ್ಲಿ ಮಾತ್ರ ಫೇಮಸ್ ಆಗಿಲ್ಲ. ಬದಲಾಗಿ ದೇಶಾದ್ಯಂತ ರಾಜಕೀಯ ವಲಯದಲ್ಲಿ ಇರಬಹುದು ಮತ್ತೊಂದು ವಿಚಾರದಲ್ಲಿ ಕಂಗನಾ ಹೆಸರು ಕೇಳಿಬರುತ್ತೆ.. ಕಾರಣ ಕಂಗನಾ ಅವರು ಎಲ್ಲಾ ವಿಚಾರದಲ್ಲೂ ಮೂಗುತೂರಿಸುತ್ತಾ, ರಾಜಕಾರಣಿಗಳು , ಸಿನಿಮಾ ತಾರೆಯರು , ಪ್ರತಿಭಟನೆಗಳ ವಿಚಾರದಲ್ಲೂ ಸುದ್ದಿಯಾಗ್ತಾರೆ.. ವಿವಾದಾತ್ಮಕ ಹೇಳಿಕೆಗಳನ್ನ ನೀಡೋದೆ ಕಂಗನಾ ಅವರಿಗೆ ರೂಡಿಯಾಗಿಬಿಟ್ಟಿದೆ.. ಯಾರೋ ಒಬ್ಬ ನಟರು ತಮ್ಮ ಬಗ್ಗೆ ಏನೇ ಬರೆದುಕೊಂಡಿದ್ರೂ ಅಲ್ಲೂ ಮೂಗು ತೂರಿಸಿ ಅವರ ಬಗ್ಗೆ ಮಾತನಾಡೋದು ಕಂಗನಾ ಅವರ ಹಳೇ ಚಾಳಿಯಾಗಿಬಿಟ್ಟಿದೆ..
ಅದ್ರಲ್ಲೂ ಕಂಗನಾ ಹೇಳಿಕೆಗಳನ್ನ ನೋಡಿದ್ರೆ ಅವರ ಪಕ್ಕಾ ಬಿಜೆಪಿ ಸರ್ಕಾರದ ಬೆಂಬಲಿಗರು ಅನ್ನುವ ರೀತಿಯಲ್ಲೇ ಪೋಸ್ಟ್ ಗಳನ್ನ ಮಾಡುತ್ತಾರೆ.. ಹೀಗೆಯೇ ಮಾಡಿ ಮಾಡಿ ಟ್ವಿಟ್ಟರ್ ನಿಂದ ಶಾಶ್ವತವಾಗಿ ಬ್ಯಾನ್ ಆಗಿದ್ದಾರೆ.. ಆದ್ರೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಚಾಳಿ ಮುಂಚುವರೆಸಿದ್ದಾರೆ.. ಈ ರೀತಿ ಅವರು ಹರಿಯಾಯುವ , ಹೀಯಾಳಿಸುವ ನಟಿಯರಲ್ಲಿ ತಾಪ್ಸಿ ಕೂಡ ಒಬ್ರು.. ಈ ಇಬ್ಬರೂ ಹಾವು-ಮುಂಗುಸಿಯಂತೆ ಆಗಾಗ ಕಿತ್ತಾಡಿಕೊಳ್ಳುತ್ತಲೇ ಇರುತ್ತಾರೆ.
ಹಾಗೆ ನೋಡಿದ್ರೆ ತಾಪ್ಸಿ ಸುಮ್ಮನೇ ಇದ್ರೂ ಕಂಗನಾ ಅವರ ಕೆಣಕಿ , ಕೆಣಕಿ ಹೋಯಾಳಿಸುತ್ತಾ ತಕಾರಾರು ತೆಗೆಯೋದು, ವಾಗ್ದಾಳಿ ನಡೆಸೋದು , ಹೀಗೆ ಸುಖಾ ಸುಮ್ಮನೇ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗ್ತಾರೆ.. ತಾಪ್ಸಿ ಸುಮ್ಮನೆ ಇದ್ರು ಕಂಗನಾ ಸುಮ್ಮನೇ ಇರೋದಿಲ್ಲ.. ಹೀಗೆಯೇ ಕಂಗನಾ 10 ಸಲ ಟಾಂಟ್ ಕೊಟ್ಟ ಮೇಲೆ ತಾಪ್ಸಿ ಒಂದೇ ಸಲ ಅಷ್ಟಕ್ಕೂ ಸೇರಿಸಿ ಖಡಕ್ ಆಗಿ ಉತ್ತರ ಕೊಡ್ತಾರೆ…
ಮತ್ತೆ ಕಂಗನಾ ಬಗ್ಗೆ ಕ್ಯಾರೇ ಅನ್ನೋದಿಲ್ಲ.. ಇತ್ತೀಚೆಗೂ ಅಷ್ಟೇ ತಾಪ್ಸಿ ವಿದೇಶದಲ್ಲಿ ಸೀರೆ ಉಟ್ಟು ಫೋಟೋಗಳನ್ನ ಹಂಚಿಕೊಂಡಿದ್ರು.. ಇದಕ್ಕೆ ಇರಲಾರದೇ ಕಂಗನಾ ಸಹೋದರಿ ರಂಗೋಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಕಂಗನಾ ವಿದೇಶದಲ್ಲಿ ಸೀರೆ ಧರಿಸಿದ ಫೋಟೋ ಶೇರ್ ಮಾಡಿ ತಾಪ್ಸಿ ಕಾಪಿ ಮಾಡಿದ್ದಾರೆ ಎಂದು ಆಡಿಕೊಂಡಿದ್ದರು..
ಅಲ್ಲದೇ ತೀರಾ ಇತ್ತೀಚೆಗೆ ತಾಪ್ಸಿ ಪನ್ನು ಕೇಂದ್ರ ಸರ್ಕಾರದ ಕೆಲವು ನೀತಿಗಳ ವಿರುದ್ಧ ಟ್ವಿಟ್ಟರ್ನಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸುತ್ತಿದ್ದಂತೆ, ಬಿಜೆಪಿಯ ಪರಮ ಭಕ್ತೆಯಾದ ಕಂಗನಾ ರಣೌತ್ ತಾಪ್ಸಿ ವಿರುದ್ಧ ಮೂದಲಿಕೆ ಶುರು ಮಾಡಿದರು. ಆರಂಭದಲ್ಲಿ ಸುಮ್ಮನಿದ್ದ ತಾಪ್ಸಿ ಆ ನಂತರ ತಾವೂ ಅಖಾಡಕ್ಕೆ ಇಳಿದು ಕಂಗನಾ ವಿರುದ್ಧ ಟ್ವೀಟ್ ಮಾಡಿದರು.
ಆ ನಂತರ ಇಬ್ಬರ ಟ್ವೀಟ್ ವಾರ್ ತುಸು ಕಡಿಮೆ ಆಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ತಾಪ್ಸಿ ಸಿನಿಮಾ ರಂಗದಲ್ಲಿ ಆಕೆಯೂ ಒಬ್ಬ ನಟಿ. ವೃತ್ತಿ ವಿಷಯದಲ್ಲಿ ಆಕೆ ನನ್ನ ಸಹೋದ್ಯೋಗಿ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಆಕೆ ಸಂಪೂರ್ಣ ಅಪ್ರಸ್ತುತ. ಈ ಹಿಂದೆಯೂ ಆಕೆ ನನಗೆ ಮುಖ್ಯವಾಗಿರಲಿಲ್ಲ. ಈಗಲೂ ಆಕೆ ನನಗೆ ಮುಖ್ಯವಲ್ಲ’ ಎಂದಿದ್ದರು.
ಅಲ್ಲದೇ ‘ಪ್ರೀತಿ ಹಾಗೂ ದ್ವೇಷ ಎರಡೂ ಹೃದಯದಿಂದಲೇ ಹುಟ್ಟುತ್ತವೆ. ದ್ವೇಷಿಸಲು ಬಯಸುವ ವ್ಯಕ್ತಿಯ ಬಗ್ಗೆ ನೀವು ಚಿಂತೆಯೇ ಮಾಡದೇ ಇರುವುದು ಅತ್ಯಂತ ಸೂಕ್ತ. ಅದು ಆ ವ್ಯಕ್ತಿಗೆ ನೀವು ನೀಡಬಹುದಾದ ಬಹುದೊಡ್ಡ ಶಿಕ್ಷೆ ಮತ್ತು ಅದರಿಂದ ನೀವು ನಿರಾಳತೆಯನ್ನು ಸಹ ಅನುಭವಿಸುತ್ತೀರಿ’ ಎಂದಿದ್ದರು.
ಇದೀಗ ಮತ್ತೆ ಕಂಗನಾ ತಾಪ್ಸಿ ವಿರುದ್ಧ ಇನ್ಸ್ಟಾಗ್ರಾಮ್ ನಲ್ಲಿ ಸುಧೀರ್ಘವಾದ ಪೋಸ್ಟ್ ಮಾಡಿ ತಾಪ್ಸಿ ವಿರುದ್ಧ ಹೀನಾಯವಾಗಿ ವಾಗ್ದಾಳಿ ನಡೆಸಿದ್ದಾರೆ.. ತಾನು ಬಿಟ್ಟಿದ್ದನ್ನು ಬೇಡುತ್ತಿದ್ದ ನಟಿ, ಬಿ ಗ್ರೇಡ್ ನಟಿ ತಾಪ್ಸಿ ಎಂದು ಕಿಡಿಕಾರಿದ್ದಾರೆ.
ಹೌದು ‘ಕಂಗನಾ ನನ್ನ ಜೀವನದಲ್ಲಿ ಅಪ್ರಸ್ತುತ. ಆಕೆ ಬಗ್ಗೆ ನಾನು ಕೇರ್ ಮಾಡೋದಿಲ್ಲ’ ಎಂಬ ತಾಪ್ಸಿ ಹೇಳಿಕೆ ಕಂಗನಾ ತಲೆಕೆಡಿಸಿದೆ.. ಇದಕ್ಕೆ ಉತ್ತರಿಸಿರುವ ಕಾಂಟ್ರವರ್ಸಿ ಕ್ವೀನ್ ಕಂಗನಾ ‘ಇಂದು ನಾನು ಆಕೆಗೆ ಅಪ್ರಸ್ತುತ ಆಗಿದ್ದೇನೆ. ಆದರೆ ಅಂದು ನಾನು ಬಿಟ್ಟಿದ್ದನ್ನು ಕೊಡಿ ಎಂದು ನಿರ್ಮಾಪಕರ ಬಳಿ ಬೇಡುತ್ತಿದ್ದಳು. ಬಿ ಗ್ರೇಡ್ ನಟಿಯರು ತನ್ನ ಹೆಸರನ್ನು ಬಳಸಿಕೊಂಡು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ ‘ಅವಳು ನಿರ್ಮಾಪಕರಿಗೆ ಫೋನ್ ಮಾಡಿ ಕಂಗನಾ ಏನನ್ನಾದರೂ ಬಿಟ್ಟಿದ್ದರೆ ಅದನ್ನು ನನಗೆ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಳು. ಈಗ ಅವಳ ಸ್ಟೇಟಸ್ ನೋಡಿ. ಈಗ ಅವಳು ನನಗೆ ಅಪ್ರಸ್ತುತ ಎಂದು ಕರೆಯುತ್ತಿದ್ದಾಳೆ. ಮನುಷ್ಯ ಮತ್ತು ಆತನ ಸ್ವಭಾವ ವಿಚಿತ್ರವಾಗಿದೆ. ನನ್ನ ಹೆಸರು ಬಳಸದೆ ಪ್ರಚಾರ ಮಾಡಲು ಪ್ರಯತ್ನಿಸು’ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ‘ಬಿ ಗ್ರೇಡ್ ನಟಿಯರು ನನ್ನ ಹೆಸರನ್ನು, ಸ್ಟೈಲ್, ಸಂದರ್ಶನ, ಜೀವನದ ತಂತ್ರಗಳನ್ನು ಯಾಕೆ ಬಳಸಿಕೊಂಡು ಅವರ ಜೀವನ ಪ್ರಮೋಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಖಂಡಿತವಾಗಿ ನನ್ನ ಹೆಸರನ್ನು ಬಳಿಸಿಕೊಂಡು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ. ಆದರೆ ನಾನು ಸ್ಫೂರ್ತಿ ಪಡೆದ ನಟಿಯರಿಗೆ ಅಗೌರವ ತೋರುತ್ತಿರಲಿಲ್ಲ. ನನಗೆ ಸ್ಫೂರ್ತಿಯಾದ ವೈಜಯಂತಿಮಾಲ, ವಹೀದಾ ಮತ್ತು ಶ್ರೀದೇವಿ ಅವರಿಗೆ ನಾನು ತುಂಬಾ ಗೌರವ ಕೊಡುತ್ತೇನೆ’ ಎಂದಿದ್ದಾರೆ.. ಇದಕ್ಕೆ ತಾಪ್ಸಿ ಪ್ರತಿಕ್ರಿಯೆ ಹೇಗಿರಲಿದೆ ಕಾದು ನೋಡ್ಬೇಕಿದೆ..









