kangana
ಕಂಗನಾಗೆ ಮೂರನೇ ಬಾರಿ ಸಮನ್ಸ್ ಜಾರಿ ಮಾಡಿದ ಮುಂಬೈ ಪೊಲೀಸರು
ಸುಶಾಂತ್ ಸಿಂಗ್ ಸಾವಿನ ಪ್ರಕರಣದಿಂದ ಹಿಡಿದು ಅನೇಕ ವಿಚಾರಗಳ ಕುರಿತು ವಾಗ್ದಾಳಿ ನಡೆಸುತ್ತಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್. ಆದ್ರೆ ಇದೇ ಅವರಿಗೆ ಕುತ್ತು ತಂದಿದೆ. ಹೌದು ಸೋಷಿಯಲ್ ಮೀಡಿಯಾದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನ ನೀಡಲಾಗಿದೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಕಂಗನಾ ಹಾಗೂ ಸಹೋದರಿ ರಂಗೋಲಿಗೆ ಮುಂಬೈ ಪೊಲೀಸರು ಮತ್ತೊಮ್ಮೆ ಸಮನ್ಸ್ ನೀಡಿದ್ದಾರೆ. ಈ ಮೂಲಕ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದಂತಾಗಿದೆ.
ಈ ಹಿಂದೆ ಅಕ್ಟೋಬರ್ 21 ಹಾಗೂ ನವೆಂಬರ್ 3 ರಂದು ಸಮನ್ಸ್ ನೀಡಿದ್ದರು. ನವೆಂಬರ್ 15ರ ನಂತರ ನಾನು ಬರಲಿದ್ದೇನೆ ಎಂದು ಹೇಳಿದ್ದರು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ನವೆಂಬರ್ 23 ರಂದು ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಮೂರನೇ ನೋಟಿಸ್ ಸೋಶಿಯಲ್ ಮೀಡಿಯಾದ ಮೂಲಕ ದ್ವೇಷ ಹರಡಿಸುವಂತಹ ಟ್ವೀಟ್ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಕಂಗನಾ ಮತ್ತು ಸಹೋದರಿ ವಿರುದ್ಧ ಕೇಸ್ ದಾಖಲಾಗಿತ್ತು.
ಇನ್ನೂ ಕಂಗನಾ ಹಾಗೂ ಸಹೋದರಿ ರಂಗೋಲಿ ವಿರುದ್ಧ ವಕೀಲರೊಬ್ಬರು ದೂರು ಸಲ್ಲಿಸಿದ್ರು. ಇವರ ಟ್ವೀಟ್ಗಳು ದ್ವೇಷಗಳನ್ನು ಹರಡುತ್ತಿರುವ ಬಗ್ಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು, ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.
kangana
ಹೆಲ್ಮೆಟ್ ಹಾಕದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ತಾಪ್ಸಿಗೆ ಬಿತ್ತು ಫೈನ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








