ಕನ್ನಡದ ಹಾಸ್ಯ ಕಲಾವಿದ ರಾಜ್ ಗೋಪಾಲ್ ನಿಧನ
ಬೆಂಗಳೂರು, ಜುಲೈ 2: ಕನ್ನಡದ ಹಾಸ್ಯ ಕಲಾವಿದ ರಾಜ್ ಗೋಪಾಲ್ ಅವರು ನಿನ್ನೆ ರಾತ್ರಿ 1 ಗಂಟೆಗೆ ತಮ್ಮ ಮನೆಯಲ್ಲೆ ಕೊನೆಯುಸಿರೆಳೆದರು. ಅವರಿಗೆ 69 ವರ್ಷ ವಯಸ್ಸಾಗಿತ್ತು ಹಾಗೂ ಅಸ್ತಮ, ಮತ್ತು ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು.
ರಾಜ್ ಗೊಪಾಲ್ ಅವರು ಕೆಂಗೇರಿ ಬಳಿಯ ವಲಗರ ಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರೋ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು. ಕನ್ನಡ ತಮಿಳು ಸೇರಿದಂತೆ 650 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ರಾಜ್ ಗೋಪಾಲ್ ಫೇಮಸ್ ಅಕ್ರೇಸ್ಟ್ರಾಗಳಿಗೆ ಮಿಮಿಕ್ರಿ ಮಾಡಿ ಹೆಸರು ಮಾಡಿದ್ದರು.

ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಹೀಗೆ ಕನ್ನಡ ದೊಡ್ಡ ನಟರ ಜೊತೆ ಅಭಿನಯಿಸಿದ್ದ ರಾಜ್ ಗೋಪಾಲ್, ಸಾಯಿ ಪ್ರಕಾಶ್ ನಿರ್ದೇಶನದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇವರಿಗೆ ಮೂರು ಜನ ಹೆಣ್ಣುಮಕ್ಕಳು ಇದ್ದು, ಕೆಲ ವರ್ಷಗಳ ಹಿಂದಿನಿಂದ ಸಿನಿಮಾ ಅವಕಾಶ ಇಲ್ಲದೆ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದರು. ರಾಜ್ ಗೋಪಾಲ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ








