ಚಂದನವನದ ಖ್ಯಾತ ನಟ ರಾಕ್ ಲೈನ್ ಸುಧಾಕರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ತಮ್ಮ ವಿಭಿನ್ನ ನಟನೆಯಿಂದಲೇ ಹೆಸರುಗಳಿಸಿ ಹಾಸ್ಯ ನಟನೆಯ ಮೂಲಕವೇ ಸ್ಯಾಂಡಲ್ ವುಟ್ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದು, ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದವರು ರಾಕ್ ಲೈನ್ ಸುಧಾಕರ್.
ಪೋಷಕನಟನಾಗಿಯೂ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ರಾಕ್ ಲೈನ್ ಸುಧಾಕರ್
ವಿಪರ್ಯಾಸವೆಂದರೇ ಇಂದು ಸಿನಿಮಾ ಒಂದರ ಶೂಟಿಂಗ್ ನಲ್ಲಿ ತೊಡಗಿದ್ದ ವೇಳೆಯೇ ರಾಕ್ ಲೈನ್ ಸುಧಾಕರ್ ಅವರಿಗೆ ಹೃದಯಾಘಾತವಾಗಿತ್ತು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.








