ಸ್ಯಾಂಡಲ್ ವುಡ್ ನ ವಿಭಿನ್ನ ಹಾಗೂ ಬಹುನಿರೀಕ್ಷಿತ ಸಿನೆಮಾವಾಗಿರುವ ಗಡಿಯಾರ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಪಕ್ಕಾ ಕಮರ್ಷಿಯಲ್ ಚಿತ್ರವಾಗಿರುವ “ಗಡಿಯಾರದಲ್ಲಿ” ಸ್ಟಾರ್ ನಟರ ದಂಡೇ ಇದೆ.
ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ರಾಜ್ ದೀಪಕ್ ಶೆಟ್ಟಿ ಹಾಗೂ ಶೀತಲ್ ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಟಾರ್ ನಟರ ತಾರಾಬಳವೇ ಚಿತ್ರದಲ್ಲಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಸೆನ್ಸಾರ್ ಮಂಡಳಿಯಲ್ಲಿ ಯು /ಎ ಸರ್ಟಿಫಿಕೇಟ್ ಪಡೆದುಕೊಂಡಿದ್ದು ರಿಲೀಸ್ ಗೆ ರೆಡಿಯಾಗಿದೆ.
ವಿಭಿನ್ನ ಕಥಾಹಂದರ, ಪೋಸ್ಟರ್ ಹಾಗೂ ಟೈಟಲ್ ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ಚಿತ್ರ ತೆರೆಗಪ್ಪಳಿಸುವುದನ್ನೇ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಮತ್ತೊಂದೆಡೆ ಚಿತ್ರದ ಡಬ್ಬಿಂಗ್ ರೈಟ್ಸ್ ಗಾಗಿ ಹಿಂದಿ, ತಮಿಳು, ತೆಲುಗು, ಭೋಜ್ಪುರಿ , ಮಳಯಾಲಂ, ಮರಾಠಿ ಭಾಷೆಗಳಲ್ಲಿ ಬಾರೀ ಡಿಮ್ಯಾಂಡ್ ಬಂದಿದೆ.
ಕರಾವಳಿಯ ಮೂಲದವರಾದ ಪ್ರಬಿಕ್ ಮೊಗವೀರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಖುದ್ದು ಬಂಡವಾಳ ಹೂಡಿದ್ದಾರೆ.
ಅಲ್ಲದೇ ಕಥೆ – ಚಿತ್ರಕಥೆ – ಸಂಭಾಷಣೆಯನ್ನೂ ಅವರೇ ಬರೆದಿರೋದು ವಿಶೇಷ.
ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಈ ಚಿತ್ರದಲ್ಲಿ ಮಾಜಿ ಪೊಲೀಸ್ ಕಮಿಷನರ್ ಸಾಂಗ್ಲಿಯಾನ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
FORMER POLICE OFFICER SANGLIYANA
ಇನ್ನೂ ಈ ಚಿತ್ರದ ಫಸ್ಟ್ ಲುಕ್ ಅನ್ನು ಸಿಎಂ ಬಿ ಎಸ್ ಯಡಿಯೂರಪ್ಪನವರು ರಿಲೀಸ್ ಮಾಡಿ ಚಿತ್ರಕ್ಕೆ ಶುಭಹಾರೈಸಿದ್ದರು.
CM B S Yadiyurappa launching poster
ಬಳಿಕ ಚಿತ್ರದ ಮತ್ತೊಂದು ಪೋಸ್ಟರ್ ಅನ್ನು ಸಚಿವ ವಿ ಸೋಮಣ್ಣ ಅವರು ಲೋಕಾರ್ಪಣೆಗೊಳಿಸಿದ್ದರು.
v somanna launching poster
ಆತ್ಮ ಸಿನೆಮಾಸ್ ಬ್ಯಾನರ್ ನ ಅಡಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಯಶ್ ಶೆಟ್ಟಿ , ರಿಯಾಜ್ ಎಂ.ಟಿ, ಗೌರಿ ಶಂಕರ್, ಪ್ರದೀಪ್ ಪೂಜಾರಿ,
ಗಣೇಶ್ ರಾವ್, ರಾಧಾ ರಾಮಚಂದ್ರ, ಮಂದೀಪ ರಾಯ್, ಪ್ರಣಯ ಮೂರ್ತಿ, ರಾಜಕ್ ಮುನಿ, DYSP ಚಬ್ಬಿ, ಮೋಕ್ಷಗೊಂಡಂ ರಾಘವೇಂದ್ರ,
ಶ್ರೀನಿವಾಸ್ ಜಿ, ಶಿವಕುಮಾರ್ ನಗರ್ ನವಿಲೆ, ವಿನಯ್ ಕುಮಾರ್ ರಾವ್, ಲೀಲಾ ಮೋಹನ್, ಸಂತೋಷ್ ಗೌಡ, ದೇವರಾಜ್, ಸಂಕಲ್ಪ್ ,
ಸಚಿನ್ ಪುರೋಹಿತ್, ವಿಕಾಸ್, ಶರ್ಮಿತಾ ಶೆಟ್ಟಿ, ಸುರಕ್ಷಿತ್ ಶೆಟ್ಟಿ, ಸ್ಪೋರ್ತಿ ಕರಡಿ, ದಬಾಂಗನಾ ಚೌಧ್ರಿ, ಪ್ರಿಯದರ್ಶನಿ ಗೌಡ, ಅರ್ಪಿತಾ ವೇಣೂರ್, ಶಿವಮೊಗ್ಗ ರಾಮಣ್ಣಸೇರಿದಂತೆ ಅನೇಕರ ತಾರಾಬಳಗವಿದೆ.
ಚಿತ್ರದಲ್ಲಿ ಅದ್ಭುತ ಹಾಡುಗಳು ಮೂಡಿಬಂದಿದ್ದು, ರಾಘವ್ ಸುಭಾಷ್ ಹಾಡುಗಳ ನಿರ್ದೇಶಿಸಿದ್ದಾರೆ.
ಇನ್ನೂ ಹೇಮಂತ್ ಕುಮಾರ್, ವ್ಯಾಸ ರಾಜ್, ಅನುರಾದಾ ಭಟ್, ಅಪುರ್ವ ಶಿವಕುಮಾರ್ ಅವರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಸಾಹಸ, ಶ್ಯಾಮ್ ಸಿಂಧನೂರು ಅವರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನೂ ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಇನ್ನೂ ಈ ಚಿತ್ರದಲ್ಲಿ ಲವ್ ಸ್ಟೋರಿ, ಕಾಮಿಡಿ, ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ , ಆಕ್ಷನ್ ಎಲ್ಲವೂ ಇರಲಿದ್ದು, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡುವುದರಲ್ಲಿ ಡೌಟೇ ಇಲ್ಲ.
ಇನ್ನೂ ಶೀಘ್ರವೇ ಚಿತ್ರ ಬೆಳ್ಳಿ ತೆರೆಗಪ್ಪಳಿಸಲಿದ್ದು, ಚಿತ್ರದ ರಿಲೀಸ್ ಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.