ಕಂಚಿನ ಕಂಠ ,ತೀಕ್ಷ್ಣ ನೋಟ, ಖಡಕ್ ಅಭಿನಯದಿಂದಲೇ ಗುರುತಿಸಿಕೊಂಡಿರುವ ಯುವನಟ ವಶಿಷ್ಠ ಸಿಂಹ (vashista simha) ಅವರ ಮುಂಬರುವ ಬಹುನಿರೀಕ್ಷಿತ ಚಿತ್ರವಾದ (kalachakra) ಕಾಲಚಕ್ರದ ಟೀಸರ್ ರಿಲೀಸ್ ಆಗಿದೆ.

ನೈಜ ಘಟನೆಗಳ ಆಧಾರಿತ ಕಥೆ ಹೊಂದಿರು ಈ ಚಿತ್ರದ ಟೀಸರ್ ಇದೀಗ ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ತಿದೆ. ವಶಿಷ್ಠನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಟೀಸರ್ ನೋಡ್ತಿದ್ರೆ, ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದ್ದು, ಸಿನಿರಸಿಕರಿಗೆ ಭರ್ಜರಿ ರಸದೌತಣ ನೀಡೋದ್ರಲ್ಲಿ ಅನುಮಾನವೇ ಇಲ್ಲ.
https://www.youtube.com/watch?v=eUnQ_Jt3ASQ
ಟೀಸರ್ ಅಭಿಮಾನಿಗಳಲ್ಲಿ ಸಿನೆಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದು, ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ಸಿನಿಮಾದ ಕ್ರೇಜ್ ಹೆಚ್ಚಾಗಿದ್ದು, ರಿಲೀಸ್ ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
ಚಿತ್ರದಲ್ಲಿ ವಶಿಷ್ಠ ಎನ್ ಸಿಂಹ ( vashista simha) ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಇನ್ನೂ ರಕ್ಷಾ , ದೀಪಾಶೆಟ್ಟಿ, ಸುಚೇಂದ್ರ ಪ್ರಸಾದ್, ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.
ರಶ್ಮಿ ಫಿಲ್ಮ್ಸ್ ನ ಬ್ಯಾನರ್ ಅಡಿ ಮೂಡಿಬರ್ತಿರುವ ಸಿನಿಮಾಗೆ ರಶ್ಮಿ. ಕೆ ಅವರ ಬಂಡವಾಳ ಹೂಡಿದ್ದಾರೆ. ಸುಮಂತ್ ಕ್ರಾಂತಿ ಅವರು ಆಕ್ಷನ್ ಕಟ್ ಹೇಳಿದ್ದು, ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿದೆ. ಎಲ್ ಎಂ ಸೂರಿ ಅವರ ಛಾಯಾಗ್ರಹಣವಿರುವ ಸಿನಿಮಾದಲ್ಲಿ ಮುರಲಿ ಕೊರಿಯಾಗ್ರಫಿ ಜಾದೂ ಮಾಡಲಿದೆ.









