ರಿಲೀಸ್ ಗು ಮುನ್ನಾ ದಾಖಲೆ ಬರೆದ ವಿಕ್ರಾಂತ್ ರೋಣಾ….
ಇದೀಗ ಸೌತ್ ಸಿನಿಮಾಗಳ ಹವಾ ಬಾಲಿವುಡ್ ಸೇರಿದಂತೆ ವಿದೇಶಗಳಲ್ಲೂ ಸಹ ದಕ್ಷಿಣದಿಂದ ನಿರ್ಮಾಣವಾದ ಚಿತ್ರಗಳು ಸಖತ್ ಸದ್ದು ಮಾಡುತ್ತಿವೆ. ಕೆಜಿಎಫ್ ಚಾಪ್ಟರ್ 2 ಈ ಚಿತ್ರಕ್ಕೆ ಉದಾಹರಣೆ. ಕೆಜಿಎಫ್ ನಂತರ ಮತ್ತೊಂದು ಕನ್ನಡ ಚಿತ್ರ ಬಾಲಿವುಡ್ ಸೇರಿದಂತೆ ವಿದೇಶಗಲ್ಲಿ ಅಬ್ಬರಿಸೋಕೆ ರೆಡಿಯಾಗುತ್ತಿದೆ. ಅದುವೆ ವಿಕ್ರಾಂತ್ ರೋಣಾ.
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ `ವಿಕ್ರಾಂತ್ ರೋಣ’ ಬಿಡುಗಡೆಯ ಮುನ್ನವೇ ದಾಖಲೆ ಬರೆದಿದೆ. ವಿದೇಶದ ವಿತರಕರು `ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನ ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.
ವಿದೇಶಿ ಮಾರುಕಟ್ಟೆಯ `ವಿಕ್ರಾಂತ್ ರೋಣ’ ಚಿತ್ರದ ಹಕ್ಕುಗಳನ್ನು `ಒನ್ ಟ್ವೆಂಟಿ 8 ಮೀಡಿಯಾ’ ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ರಿಲೀಸ್‌ಗೂ ಮುಂಚೆನೇ ಚಿತ್ರ ಈ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದೆ.
ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ ೩ಡಿ ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ.