ಕನ್ನಡತಿ ಹಾಗೂ ಬಹುಭಾಷಾ ನಟಿ ಪ್ರಿಯಾಮಣಿ (Priyamani) ದಳಪತಿಗೆ ಜೋಡಿಯಾಗಲು ಸಿದ್ಧರಾಗಿದ್ದಾರೆ.
ಪ್ರಿಯಾಮಣಿ ಕನ್ನಡ ಬಿಟ್ಟು ಈಗ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಇನ್ನಿತರ ಚಿತ್ರರಂಗದಲ್ಲಿ ಬ್ಯೂಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿದ್ದ ‘ಜವಾನ್’ (Jawan) ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಹೀಗಾಗಿ ಪ್ರಿಯಾಮಣಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗ ವಿಜಯ್ ದಳಪತಿ ನಟಿಸಲು ಸಿದ್ಧರಾಗುತ್ತಿದ್ದಾರೆ.
ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ಪ್ರಿಯಾಮಣಿ ಕೂಡ ನಟಿಸುತ್ತಿದ್ದಾರೆ. ನಟಿ ಕೂಡ ಚಿತ್ರತಂಡ ಸೇರ್ಪಡೆಯಾಗಿರುವ ಕುರಿತು ತಂಡ ಅಧಿಕೃತವಾಗಿ ಹೇಳಿಕೊಂಡಿದೆ. ಮೊದಲ ಬಾರಿಗೆ ನಟಿ ಪ್ರಿಯಾಮಣಿ ಅವರು ವಿಜಯ್ ದಳಪತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ರಿವೀಲ್ ಮಾಡಿಲ್ಲ. ಆದರೆ, ಪವರ್ಫುಲ್ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಪೂಜಾ ಹೆಗ್ಡೆ (Pooja Hegde), ಮಮಿತಾ ಬೈಜು (Mamitha Baiju), ಪ್ರಕಾಶ್ ರಾಜ್ ಚಿತ್ರದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಈಗ ಪ್ರಿಯಾಮಣಿ ಕೂಡ ‘ದಳಪತಿ 69’ ತಂಡ ಸೇರಿಕೊಂಡಿದ್ದಾರೆ.
ಪ್ರಿಯಾಮಣಿ ನಟಿಸಿರುವ ಜವಾನ್, ಆರ್ಟಿಕಲ್ 370, ಮೈದಾನ್ ಚಿತ್ರಗಳು ಯಶಸ್ಸು ಕಂಡಿವೆ. ಹೀಗಾಗಿ ತೆಲುಗು, ತಮಿಳು, ಹಿಂದಿಯಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಕನ್ನಡದ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲೂ ನಟಿಸಿದ್ದಾರೆ.