Delhi AIIMS | ದೆಹಲಿ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಡಾ.ಎಂ.ಶ್ರೀನಿವಾಸ್ ನೇಮಕ
ಯಾದಗಿರಿ : ಪ್ರತಿಷ್ಠಿತ ದೆಹಲಿ ಏಮ್ಸ್ ನೂತನ ನಿರ್ದೇಶಕರಾಗಿ ಕನ್ನಡಿಗ ಡಾ.ಎಂ.ಶ್ರೀನಿವಾಸ್ ಆಯ್ಕೆ ಆಗಿದ್ದಾರೆ.
ದೆಹಲಿ ಏಮ್ಸ್ ನ ಹೊಸ ನಿರ್ದೇಶಕರಾಗಿ ನೇಮಕಗೊಂಡಿರುವ ಡಾ. ಎಂ ಶ್ರೀನಿವಾಸ್ ಯಾದಗಿರಿ ಮೂಲದವರಾಗಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಡಾ.ಎಂ.ಶ್ರೀನಿವಾಸ್, ಯಾದಗಿರಿಯ ನ್ಯೂ ಕನ್ನಡ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು.
ಬಳ್ಳಾರಿಯ ಏಮ್ಸ್ನಲ್ಲಿ 1984ರ ಬ್ಯಾಚ್ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು.
ಸದ್ಯ ಹೈದರಾಬಾದ್ನ ಸನತ್ ನಗರದ ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿದ್ದು, ಇದಕ್ಕೂ ಮೊದಲು ಅವರು ದೆಹಲಿಯ ಏಮ್ಸ್ನಲ್ಲಿಯೇ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕಾರ್ಯನಿರ್ವಹಿಸಿದ್ದರು.
ಇದೀಗ ಹುದ್ದೆಯನ್ನು ವಹಿಸಿಕೊಳ್ಳುವ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಇವರ ಕಿರಿಯ ಸಹೋದರ ಡಾ. ಎಂ. ನಾಗರಾಜ್ ಕಲ್ಬುರ್ಗಿ ಈಎಸ್ಐಸಿ ಆಸ್ಪತ್ರೆಯ ದಂತ ವಿಭಾಗದ ಡೀನ್ ಆಗಿದ್ದಾರೆ.