ಕನ್ನಡಕ್ಕೆ ಮೊದಲ ಆದ್ಯತೆ ಎಂದ ನಟಿ ಸಪ್ತಮಿ ಗೌಡ…
ಕಾಂತಾರ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಜನರ ಮನಸ್ಸು ಮುಟ್ಟಿದೆ.. ಅದ್ರಲ್ಲೂ ಪಕ್ಕ ಹಳ್ಳಿ ಹುಡುಗಿ ಅವತಾರದಲ್ಲಿ ಮಿಂಚಿದ ಮೂಗುತ್ತಿ ಸುಂದರಿ , ಬೆಂಗಳೂರಿನ ಹುಡುಗಿ ಸಪ್ತನಿ ಗೌಡ ಪಾತ್ರ ಎಲ್ಲರಿಗೂ ತುಂಬಾ ಇಷ್ಟವಾಗಿದೆ.. ಡಿ ಗ್ಲಾಮ್ ಪಾತ್ರದಲ್ಲಿ ಸಹಜವಾಗಿ ಫಾರೆಸ್ಟ್ ಗಾರ್ಡ್ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರನ್ನ ಮೋಡಿ ಮಾಡಿದ್ದಾರೆ..
ಕಾಂತಾರ ಸಿನಿಮಾ ನಂತರ ಸಪ್ತಮಿಗೆ ಒಳ್ಳೊಳ್ಳೆ ಆಫರ್ ಗಳು ಸಿಗ್ತಿದೆಯಂತೆ.. ಅಂದಹಾಗೆ ಬಹುತೇಕರಿಗೆ ಸಪ್ತಮಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಪುತ್ರಿ ಎಂಬ ವಿಚಾರ ಗೊತ್ತಿದ್ರೂ ಇನ್ನೂ ಕೆಲವರಿಗೆ ಗೊತ್ತಿಲ್ಲ.
ಹಳ್ಳಿ ಹುಡುಗಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಎಲ್ಲರ ಹೃದಯ ಗೆದ್ದಿದ್ದು , ಇದೀಗ ಪಾತ್ರ ಹಾಗೂ ಕಥೆಗೆ ಅವಶ್ಯಕತೆಯಿದ್ದರೆ ಗ್ಲಾಮರಸ್ ಪಾತ್ರದಲ್ಲೂ ನಟಿಸಲು ರೆಡಿ ಎಂದಿದ್ದಾರೆ..
ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುವಾಗ ಕನ್ನಡಕ್ಕೆ ಮೊದಲ ಆದ್ಯತೆ ಬೇರೆ ಭಾಷೆಗಳಿಂದ ಅವಕಾಶ ಸಿಕ್ಕರೂ ನಟಿಸೋಕೆ ಅಭ್ಯಂತರವಿಲ್ಲ. ಆದರೆ ಕಥೆ, ಪಾತ್ರ ಮುಖ್ಯ. ಏನೇ ಇದ್ದರೂ ಕನ್ನಡಕ್ಕೆ ಮೊದಲ ಆದ್ಯತೆ. ಎಲ್ಲಾ ತರಹದ ಪಾತ್ರಗಳನ್ನು ಮಾಡುವ ಆಸೆ ಇದೆ. ಈ ತರ ಪಾತ್ರ ಆ ತರ ಪಾತ್ರ ಎಂದು ಏನು ಇಲ್ಲ. ನಟನೆಗೆ ಅವಕಾಶ ಇರುವಂತಹ ಪಾತ್ರಗಳು ಬೇಕು. ಒಳ್ಳೆ ಅವಕಾಶಗಳು ಸಿಕ್ಕರೆ ನಟಿಸುತ್ತೇನೆ. ಸುಖಾಸುಮ್ಮನೆ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
Kantara: Actress Saptami Gowda says first priority for Kannada…
ಇದನ್ನೂ ಓದಿ – https://saakshatv.com/we-will-cancel-t…nka-gandhi-vadra/








