‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯ ಕೌಂಟ್‌ಡೌನ್ ಶುರುವಾಗಿದ್ದು, ಈ ಸಿನಿಮಾದ ಡಿಜಿಟಲ್ ಹಕ್ಕುಗಳೇ ಈಗ ದೊಡ್ಡ ಸುದ್ದಿಯಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿಸಿದ್ದು, ಚಿತ್ರ ತಂಡಕ್ಕೆ ಭಾರೀ ₹125 ಕೋಟಿ ನೀಡಲಾಗಿದೆ ಎನ್ನಲಾಗುತ್ತಿದೆ.
ಈ ಮೊತ್ತವೇ ಬೇರೆ ಒಂದು ಭಾರೀ ಬಜೆಟ್ ಸಿನಿಮಾ ನಿರ್ಮಿಸಲು ಸಾಕು ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ಕೇಳಿಬಂದಿದೆ. ಹೀಗಾಗಿ, ಈ ಮೊತ್ತದಲ್ಲಿ ಮತ್ತೊಂದು ‘KGF-2’ ಮಾಡಬಹುದು ಎಂದು ಹಲವರು ಹೋಲಿಕೆ ಮಾಡಿದ್ದಾರೆ. ‘KGF-2’ ನಿರ್ಮಾಣ ವೆಚ್ಚ ₹100 ಕೋಟಿ ಮಾತ್ರವಾಗಿತ್ತು. ಇನ್ನು ಕೆಲವರು ಇದನ್ನು ‘KGF-3’ ಬಜೆಟ್‌ಗೆ ಸಮಾನವೆಂದೂ ಹೇಳಿದ್ದಾರೆ.
ಚಿತ್ರದ ಟ್ರೇಲರ್, ಟೀಸರ್‌ಗೆ ದೊರೆಯುತ್ತಿರುವ ಪ್ರತಿಕ್ರಿಯೆ ನೋಡಿದರೆ, ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.








