Kantara: 350 ಕೋಟಿ ದಾಟಿದ ಕಾಂತಾರದ ಬಾಕ್ಸ್ ಆಫೀಸ್ ಕಲೆಕ್ಷನ್….
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ. ಇದೀಗ ಈ ಚಿತ್ರ ವಿಶ್ವದಾದ್ಯಂತ 350 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ.
ಸುಮಾರು 15 ರಿಂದ 16 ಕೋಟಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ನೋಡಿ ಇಡೀ ಚಿತ್ರರಂಗ ಆಶ್ಚರ್ಯ ಪಡುತ್ತಿದೆ. ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದರೂ ಸಹ ಚಿತ್ರದ ಓಟಕ್ಕೆ ಕುಂದು ಬಂದಿಲ್ಲ. ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಕಾಂತಾರ ಇತರ ಭಾಷೆಗಳಲ್ಲಿಯೂ ಅದ್ಭುತ ಯಶಸ್ಸನ್ನು ಪಡೆಯುತ್ತಿದೆ.
ವಿಶ್ವಾದ್ಯಂತ 355.19 ಕೋಟಿ ಕಲೆಕ್ಷನ್
ಕಾಂತಾರ ಒಟ್ಟಾರೆ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ವಿಶ್ವದಾದ್ಯಂತ 350 ಕೋಟಿಗೂ ಹೆಚ್ಚು ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 277.20 ಕೋಟಿ ಕಲೆಕ್ಷನ್ ಮಾಡಿದ್ದರೆ. ವಿದೇಶದಲ್ಲಿ 28.10 ಕೋಟಿ ಗಳಿಸಿದೆ. ಒಟ್ಟಾರೆಯಾಗಿ ಈ ಚಿತ್ರ ಇದುವರೆಗೆ 355.19 ಕೋಟಿ ಕಲೆಕ್ಷನ್ ಮಾಡಿದೆ.
ಕಾಂತಾರ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದರೂ ಚಿತ್ರದ ಗಳಿಕೆ ಮುಂದುವರಿದಿದೆ. ಹಿಂದಿ ಭಾಷೆಯಲ್ಲೂ ಭರ್ಜರಿ ವ್ಯಾಪಾರ ಮಾಡುತ್ತಿದೆ. ಈ ಚಿತ್ರ ಹಿಂದಿ ಭಾಷೆಯಲ್ಲಿ ಇದುವರೆಗೆ 67 ಕೋಟಿ ರೂಪಾಯಿಗಳನ್ನ ಕೊಳ್ಳೆ ಹೊಡೆದಿದೆ. ಹಿಂದಿ ಯಲ್ಲಿ ಈ ಚಿತ್ರ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
Kantara Crosses 350 Crores, Continues To Earn Great Even After 40 Days








