ಕಾಂತಾರವನ್ನ ಮತ್ತೆ ರಿಷಬ್ ರಿಂದಲೇ ಮಾಡಲು ಸಾಧ್ಯವಿಲ್ಲ – ದೇವದಾಸ್ ಕಾಪಿಕಾಡ್
4 ಭಾಷೆಗಳಲ್ಲಿ ತೆರೆಕಂಡು ನಾಲ್ಕು ಭಾಷೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ಇದೀಗ ಮಲಯಾಳಂ ಭಾಷೆಯಲ್ಲೂ ಬಿಡುಗಡೆಗೆ ಸಜ್ಜಾಗಿದೆ, ಇಂದಿನಿಂದ ಮಲಯಾಳಂನಲ್ಲಿ ಕಾಂತಾರ ಕ್ರೇಜ್ ಮುಂದುವರೆಯಲಿದೆ.
ಕಾಂತಾರವನ್ನ ಎಲ್ಲಾ ಭಾಷಯ ನಟರು ಮೆಚ್ಚಿ ಕೊಂಡಾಡಿದ್ದಾರೆ ಇದೀಗ ಈ ಲೀಸ್ಟ್ ಗೆ ತುಳು ಖ್ಯಾತ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಸೇರಿಕೊಂಡಿದ್ದಾರೆ.
ನಟ ದೇವದಾಸ್ ಅವರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಯಾವುದೇ ಭಾಷೆಯಲ್ಲಿ ಬಂದ್ರು ಈ ಸಿನಿಮಾ ಬಂದ್ರೂ ಗೆಲ್ಲುತ್ತೆ. ಜಪಾನೀಸ್ ಇರಲಿ , ಚೈನೀಸ್ ಇರಲಿ ಎಲ್ಲಾ ಬಾಷೆಯಲ್ಲೂ ಸಿನಿಮಾ ಓಡುತ್ತೆ ಎಂದಿದ್ದಾರೆ.
ಅಷ್ಟೇ ಯಾಕೆ. ಈ ಸಿನಿಮಾವನ್ನ ಮತ್ತೆ ರಿಷಬ್ ಅವರಿಂದಲೇ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಚಿತ್ರ ಬಹಳಷ್ಟು ನೈಜವಾಗಿ ಮೂಡಿಬಂದಿದೆ. ಚಿತ್ರದ ಬಗ್ಗೆ ವಿರೋಧ ಮಾಡುವವರು ತಮ್ಮ ಬಗ್ಗೆ ತಾವು ವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ. ದೈವಾರಾಧನೆಗೆ ಯಾವ ಚ್ಯುತಿಯೂ ಬಾರದಂತೆ ಸಿನಿಮಾ ನಿರ್ಮಿಸಲಾಗಿದೆ.
ದೈವಾರಾಧಾನೆ ತುಳುನಾಡಿನ ಪ್ರಮುಖ ಅಂಗ.. ಅದು ಹಿಂದೂ ಧರ್ಮದ ಭಾಗ ಅಲ್ಲ ಅನ್ನೋರನ್ನ ಏನೂ ಮಾಡಲೂ ಸಾಧ್ಯವಿಲ್ಲ, ಅಂಥವರಿಗೆ ಉತ್ತರ ಕೊಡದೇ ಇರುವುದೇ ಉತ್ತಮ, ಸತ್ಯ ಏನೆಂದು ಅವರಿಗೆ ಗೊತ್ತಾದಾಗ ಅವರೇ ಸರಿಹೋಗ್ತಾರೆ ಎನ್ನುತ್ತ ಹೆಸರು ಹೇಳದೇ ಪರೋಕ್ಷವಾಗಿ ಚೇತನ್ ಗೆ ಟಾಂಟ್ ಕೊಟ್ಟಿದ್ದಾರೆ.
Kantara: Kantara can’t be made again by Rishabh – Devdas kapikad








