Koppala | ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಪಿಲತೀರ್ಥ
ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮಳೆ ಜೋರಾಗಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ ಕೆರೆಗಳು ಭರ್ತಿಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಈ ನಡುವೆ ಭಾರಿ ಮಳೆಯ ಕಾರಣದಿಂದಾಗಿ ಜಿಲ್ಲೆಯಲ್ಲಿರುವ ಏಕೈಕ ಜಲಾಪಾತ ಕಬ್ಬರಗಿಯ ಕಪಿಲತೀರ್ಥ ಮೈದುಂಬಿ ದುಮುಕ್ಕುತ್ತಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಬಳಿಯ ಬೆಟ್ಟದಲ್ಲಿ ಈ ಜಲಪಾತವಿದೆ.
ಇದನ್ನ ಸ್ಥಳೀಯರು ಕಪಲೆಪ್ಪನ ದಿಡಗು ಎಂದು ಕರೆಯುತ್ತಾರೆ.
ಸದ್ಯ ಸುಮಾರು 40 ಅಡಿ ಎತ್ತರದಿಂದ ನೀರು ಧುಮ್ಮಕ್ಕುತ್ತಿದೆ.
ಜಲಪಾತ ನೋಡಲು ಸುತ್ತಲಿನ ಜನರು ಸೇರಿದಂತೆ ಹೊರ ಜಿಲ್ಲೆ ಯಿಂದ ಕೂಡ ಆಗಮಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಲಪಾತಕ್ಕೆ ಜೀವ ಕಳೆಬಂದಿದೆ.
ಆದ್ರೆ ಈ ಸ್ಥಳದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ಇಲ್ಲಿ ಈ ಹಿಂದೆ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದರು.
ಅರಣ್ಯ ಪ್ರದೇಶದಲ್ಲಿರುವ ಜಲಪಾತ ಅರಣ್ಯ ಅಧಿಕಾರಿಗಳ ತಕರಾರಿನಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಾದವೂ ಕೇಳಿಬಂದಿದೆ.