ಕೆಜಿಎಫ್ ಟ್ರೇಲರ್ ಲಾಂಚ್ ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್
ಕೆ ಜಿ ಎಫ್ ಚಿತ್ರದ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹೊಂಬಾಳಡೆ ಫಿಲಂಸ್ ಕೆಜಿಎಫ್ ಟ್ರೇಲರ್ ಅನ ಕಾರ್ಯಕ್ರಮ ಮೂಲಕ ಲಾಂಛ್ ಮಾಡಲು ನಿರ್ಧರಿಸಿದೆ. ಈ ಚಿತ್ರದ ಟ್ರೇಲರ್ ಲಾಂಛ್ ಈವೆಂಟ್ ಅನ್ನ ಬಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹಾರ್ ಹೋಸ್ಟ್ ಮಾಡಲಿದ್ದಾರೆ.
ಕೆಜಿಎಫ್ ಚಾಪ್ಟರ್ 2 ರ ಟ್ರೈಲರ್ ಮಾರ್ಚ್ 27 ರಂದು ಸಂಜೆ 6.40 ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಇದಾದ ಕೆಲವೇ ದಿನಗಳಲ್ಲಿ ಏಪ್ರಿಲ್ 14 ರಂದು ಕೆಜಿಎಫ್ 2 ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಮಾತ್ರವಲ್ಲದೆ ಚಿತ್ರ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.
ಕರಣ್ ಜೋಹರ್ ಕೆಜಿಎಫ್ ಚಾಪ್ಟರ್ 2 ನ್ನ ಗ್ರ್ಯಾಂಡ್ ಲಾಂಚ್ ಆಗಿ ಅನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟರಾದ ಯಶ್, ಶ್ರೀನಿಧೀ, ಮತ್ತು ಸಂಜಯ್ ದತ್ ಅವರಲ್ಲದೆ, ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.








