ಬೆಂಗಳೂರು: ವೈಜ್ಞಾನಿಕ ಪರಿಹಾರಕ್ಕೆ ಕಾರಂಜಾ (Karanja Dam) ಸಂತ್ರಸ್ತರು ಕಳೆದ 80ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇವರಿಗೆ ಈಗಾಗಲೆ ಪರಿಹಾರ ನೀಡಿದ್ದು, ಹೆಚ್ಚುವರಿ ಪರಿಹಾರ ನೀಡಲು ಬರುವುದಿಲ್ಲ ಎಂದು ವಿಧಾನ ಪರಿಷತ್ ನಲ್ಲಿ ಜನಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (Govind Karjol) ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಎಂಎಲ್ಸಿ ಅರವಿಂದ್ ಕುಮಾರ್ ಅವರು ಕೇಳಿದ ಕಾರಂಜಾ ಮುಳುಗಡೆ ಪರಿಹಾರಕ್ಕೆ ಒತ್ತಾಯಿಸಿ ರೈತರು 80 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ sಎಂಬ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ ಅವರು ಹೆಚ್ಚವರಿ ಪರಿಹಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ 69 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ. 25-30 ವರ್ಷದ ನಂತರ ಧರಣಿ ಕೂತರೆ ಪರಿಹಾರ ಕೊಡಲು ಸಾಧ್ಯವಾ? ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದರು.
ಹಿನ್ನೆಲೆ
ಕಾರಂಜಾ ಡ್ಯಾಂ ನಿರ್ಮಾಣದಿಂದ ರೈತರು ಸುಮಾರು 15 ಸಾವಿರ ಎಕರೆಯಷ್ಟು ಜಮೀನು ಭೂಮಿ ಕಳೆದುಕೊಂಡಿದ್ದಾರೆ. ಕಾರಂಜಾ ಡ್ಯಾಂ ನಿರ್ಮಾಣದಿಂದ ರೈತರ ಭೂಮಿ ಮತ್ತು ಮನೆಗಳು ಮುಳುಗಡೆಯಾಗಿವೆ. ಭೂಮಿ ಕಳೆದಕೊಂಡ ರೈತರಿಗೆ ಸರ್ಕಾರ ಪ್ರತಿ ಎಕರೆಗೆ ಹತ್ತು ಸಾವಿರ ಕೊಟ್ಟಿತ್ತು. ಆದರೆ ತಮಗೆ ವೈಜ್ಞಾನಿಕ ಪರಿಹಾರ ನೀಡಿಲ್ಲವೆಂದು ರೈತರು ಕಳೆದ 80 ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ.
ಡ್ಯಾಂ ನಿರ್ಮಾಣದ ವೇಳೆ ಸೂಕ್ತ ವೈಜ್ಞಾನಿಕ ಪರಿಹಾರ ಕೊಡುವುದಾಗಿ ಹೇಳಿ ಸರ್ಕಾರ ರೈತರ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಇಲ್ಲವರೆಗು ಸೂಕ್ತ ಪರಿಹಾರ ನೀಡಿಲ್ಲವೆಂದು ರೈತರು ಪ್ರಭಟನೆ ಮಾಡುತ್ತಿದ್ದಾರೆ. ಸರ್ಕಾರ ವೈಜ್ಞಾನಿಕ ಕೊಡುವಂತೆ 1975 ರಿಂದ ಪ್ರತಿಭಟನೆ ಮಾಡುತ್ತಲೆ ಬಂದಿದ್ದಾರೆ. ಹೀಗಾಗಿ ರೈತರು ಕಳೆದ 80 ದಿನಗಳಿಂದ ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ಕಾರಂಜಾ ಜಲಾಶಯ ದಿಂದ 28 ಹಳ್ಳಿಗಳ ರೈತರು ಭೂಮಿ ಮನೆಗಳನ್ನು ಕಳೆದುಕೊಂಡಿದ್ದಾರೆ