ಉಡುಪಿ: ಕಾರ್ಕಳದಲ್ಲಿ (Karkala) ಯುವತಿ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗಳನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ (Police Coustody) ಒಪ್ಪಿಸಿದೆ.
ಆ.23 ರಂದು ಅತ್ಯಾಚಾರ ಆರೋಪ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಕೋರ್ಟ್ ಎದುರು ಹಾಜರುಪಡಿಸಿದ್ದರು.
ಈ ಕುರಿತು ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಮಾತನಾಡಿ, ಪ್ರಮುಖ ಆರೋಪಿಗಳಾದ ಅಲ್ತಾಫ್, ರಿಚರ್ಡ್ ನನ್ನು ಪೊಲೀಸ್ ಕಸ್ಟಡಿಗೆ ಕಾರ್ಕಳ ನಗರಠಾಣೆ ಪೊಲೀಸರು ಕೇಳಿದ್ದರು. ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿ ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮನವಿ ಮಾಡಿದ್ದರು.
ಸಂತ್ರಸ್ತ ಯುವತಿಗೆ ಅಲ್ತಾಫ್ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ನಂತರ ಯುವತಿಯನ್ನು ಪುಸಲಾಯಿಸಿ ಸುತ್ತಾಡಲು ಆರೋಪಿ ಕರೆದುಕೊಂಡು ಹೋಗಿದ್ದಾನೆ. ಆರೋಪಿಯು ಸ್ನೇಹಿತರನ್ನು ಕರೆಯಿಸಿ ಬಿಯರ್ ಬಾಟಲಿ ತರಿಸಿದ್ದ. ಆದರೆ, ಬಿಯರ್ ನಲ್ಲಿ ಮಾದಕ ವಸ್ತು ಬೆರೆಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೃತ್ಯ ನಡೆದ ನಂತರ ಯುವತಿಯನ್ನು ಮನೆ ಸಮೀಪ ಬಿಟ್ಟು ಹೋಗಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.