ಕಾರ್ಕಳ ಮಾಳ ಮುಳ್ಳೂರು ಘಾಟಿನಲ್ಲಿ ಬಸ್ ಬಂಡೆಗಲ್ಲಿಗೆ ಬಡಿದು ಬಸ್ ನಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ಸಾಯಂಕಾಲ ಸಂಭವಿಸಿದೆ. ಬಸ್ಸು ಕುದುರೆಮುಖ ದಾರಿಯಾಗಿ ಧರ್ಮಸ್ಥಳಕ್ಕೆ ಹೊರಟಿರುವಾಗ ಈ ಘಟನೆ ಸಂಭವಿಸಿದೆ.

ಮೈಸೂರು ಖಾಸಗಿ ಕಂಪೆನಿಗೆ ಸೇರಿದ ಬಸ್ ಇದಾಗಿದ್ದು, ಕುದುರೆಮುಖ ದಾರಿಯಾಗಿ ಧರ್ಮಸ್ಥಳಕ್ಕೆ ಹೊರಟಿತ್ತು.
ಅತ್ಯಂತ ವೇಗದಿಂದ ಬಂದು ಇಲ್ಲಿನ ತಿರುವಿನಲ್ಲಿರುವ ಬಂಡೆಕಲ್ಲಿಗೆ ಬಸ್ ಬಡಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಮೈಸೂರಿನ ವೈಟಲ್ ರೆಕಾಡ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 35 ಮಂದಿ ಈ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಇವರೆಲ್ಲಾ ಪ್ರವಾಸಕ್ಕೆ ಹೊರಟಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.








