Karnataka assembly | ಸದನದಲ್ಲಿ ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿದ್ದು ದೇಶದ್ರೋಹ
ಬೆಂಗಳೂರು : ತಿರಂಗಕ್ಕೆ ಅವಮಾನ ಮಾಡಿ, ಸದನದಲ್ಲಿ ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿದ್ದು ದೇಶದ್ರೋಹವಲ್ಲದೆ ಮತ್ತೇನು ಎಂದು ಕಾಂಗ್ರೆಸ್ ನಾಯಕರ ವಿರುದ್ಧದ ಬಿಜೆಪಿ ಕಿಡಿಕಾರಿದೆ. karnataka-assembly BJP blames congress protest
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಿಜಾಬ್ ಪರವಾಗಿ ಕೆಪಿಸಿಸಿ ಕಚೇರಿಯಿಂದಲೇ ಸೂಚಿತವಾಗಿರುವ ವ್ಯಕ್ತಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ಇಲ್ಲವಾದರೆ, ಹಿಂದೂ ಧರ್ಮೀಯರು ಕೂಡಾ ಬಳೆ, ಹೂವು, ಕುಂಕುಮ ಇಡಬಾರದಂತೆ!!! ಹಿಂದೂ ಧರ್ಮ ಈ ನೆಲದ ಸಂಸ್ಕೃತಿ, ಅದನ್ನೇ ಇಂದು ಕಾಂಗ್ರೆಸ್ ವಿರೋಧಿಸುತ್ತಿದೆ.
ಹಿಜಾಬ್ ವಿವಾದ ನ್ಯಾಯಾಲಯದ ಮೆಟ್ಟಿಲೇರುವ ಹಿಂದೆ ಕಾಂಗ್ರೆಸ್ ಪಕ್ಷದ ಶ್ರಮವಿದೆ.
ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳೇ ಹಿಜಾಬ್ ಪರವಾಗಿ ನ್ಯಾಯಾಲಯಕ್ಕೆ ಅರ್ಜಿಯ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ.
https://twitter.com/BJP4Karnataka/status/1494554773789417474?s=20&t=iolkpJqISP367x9ziJKHAw
ಕಾಂಗ್ರೆಸ್ ಹಿಜಾಬ್ ಪರವಾಗಿ ಇರುವುದಕ್ಕಿಂತ ಹೆಚ್ಚಾಗಿ ಕುಂಕುಮ, ಬಳೆ, ಹೂವು ಮುಡಿಯುವುದರ ವಿರುದ್ದವಿದೆ.
ಹಿಜಾಬ್ ಪರವಾಗಿರುವ ಕಾಂಗ್ರೆಸ್, ಶೈಕ್ಷಣಿಕ ವಾತವಾರಣದಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸುವುದೇ ಆದಲ್ಲಿ, ಹಿಂದೂಗಳು ಕುಂಕುಮ ಇಡಬಾರದು, ಬಳೆ, ಹೂವು ಮುಡಿಯಬಾರದು ಎನ್ನುವ ಅಸಮಂಜಸ ವಾದವನ್ನು ಸಮಾಜದ ಮುಂದಿಡುತ್ತಿದೆ.
ಹಿಂದೂ ಸಂಸ್ಕೃತಿ, ಹಿಂದೂಗಳ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೇಕೆ ಇಷ್ಟೊಂದು ಅಸಹನೆ?
ರಾಷ್ಟ್ರ ಧ್ವಜವೇ ಇರದಿದ್ದ ಸ್ಥಂಭದಲ್ಲಿ, ರಾಷ್ಟ್ರ ಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದು ತಿರಂಗಕ್ಕೆ ಮಾಡಿದ ಅವಮಾನವಲ್ಲವೇ?
ತಿರಂಗಕ್ಕೆ ಅವಮಾನ ಮಾಡಿ, ಸದನದಲ್ಲಿ ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿದ್ದು ದೇಶದ್ರೋಹವಲ್ಲದೆ ಮತ್ತೇನು ಎಂದು ಕುಟುಕಿದೆ.








