ಬೆಂಗಳೂರು : ರಾಜ್ಯ ಚುನಾವಣೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಪ್ರಧಾನಿ ಮೋದಿ ಅವರು ಈ ಬಾರಿಯೂ ರಾಜ್ಯದಲ್ಲಿ ಕಮಲ ಅರಳಿಸುವ ಕನಸು ಕಾಣುತ್ತಿದ್ದಾರೆ. ಹೀಗಾಗಿಯೇ ತಾವು ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಮೂರನೇ ಬಾರಿ ಆಗಮಿಸಿದ್ದಾರೆ. ಇಂದು ನಗರದ ಸೋಮೇಶ್ವರ ಸಭಾಭವನದಿಂದ ರಸ್ತೆಯಿಂದ ಅದ್ಧೂರಿಯಾಗಿ ರೋಡ್ ಶೋ (Road Show) ಆರಂಭಿಸಿದ್ದಾರೆ. ಈ ರೋಡ್ ಶೋ ಬರೋಬ್ಬರಿ 26.5 ಕಿ.ಮೀ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರೇಷ್ಮೆಯ ಕೇಸರಿ ಮೈಸೂರು ಪೇಟಾದಲ್ಲಿ ಕಂಗೊಳಿಸುತ್ತಿದ್ದಾರೆ. ಪಿಸಿ ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡುತ್ತಿದ್ದಾರೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ರೋಡ್ ಶೋ ನಡೆಯುತ್ತಿದೆ. ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ಮಾಡುತ್ತಿದ್ದು, ಆಗಮಿಸಿದ ಅಸಂಖ್ಯಾತ ಜನರು ಕೈ ಬೀಸಿ ಸ್ವಾಗತಿಸುತ್ತಿದ್ದಾರೆ.
ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂಮಳೆ ಸುರಿಸಿ ಸಂಭ್ರಮಿಸಿದ್ದಾರೆ. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿದೆ. ಇಂದಿನ ರೋಡ್ ಶೋ ಬ್ರಿಗೇಡ್ ಮಿಲೇನಿಯಂ ರೋಡ್, ಟಿಎಂಸಿ ಲೇಔಟ್, ಮಾರೇನಹಳ್ಳಿ ರೋಡ್, ಜೆಪಿನಗರ 5ನೇ ಹಂತ, ಜಯನಗರ ಮೆಟ್ರೋ ಸ್ಟೇಷನ್, ಜಯನಗರ ಟ್ರಾಫಿಕ್ ಪೊಲೀಸ್ ಸ್ಟೇಷನ್, ಆರ್.ವಿ ರೋಡ್, ಸೌತ್ ಎಂಡ್ ಸರ್ಕಲ್, ಆರ್ಮುಗಂ ಸರ್ಕಲ್, ಮಾಧವ ರಾವ್ ಸರ್ಕಲ್, ದೊಡ್ಡ ಗಣಪತಿ ಟೆಂಪಲ್ ಜಂಕ್ಷನ್, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಟಿ.ಆರ್. ಮಿಲ್ ಜಂಕ್ಷನ್, ಶಿರ್ಸಿ ಸರ್ಕಲ್, ಬಿನ್ನಿಮಿಲ್ ಸರ್ಕಲ್, ಕುಷ್ಠರೋಗ ಆಸ್ಪತ್ರೆ, ಮಾಗಡಿ ರೋಡ್ ಟೋಲ್‍ಗೇಟ್.
ವೀರೇಶ್ ಥಿಯೇಟರ್, ಬಿಎಸ್‍ಎನ್‍ಎಲ್ ವಿಜಯನಗರ , ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಹಾವನೂರು ಸರ್ಕಲ್, ಬಸವೇಶ್ವರನಗರ, ಶಂಕರಮಠ, ಮೋದಿ ಹಾಸ್ಪಿಟಲ್ ಸಿಗ್ನಲ್, ನವರಂಗ್ ಬ್ರಿಡ್ಜ್, ಮಹಾಕವಿ ಕುವೆಂಪು ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಕಾಡು ಮಲ್ಲೇಶ್ವರ ದೇವಸ್ಥಾನದವರೆಗೆ ಸಾಗಲಿದೆ.