ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಕುರುಡು ಕಾಂಚಾಣಾ ಕುಣಿಯುತ್ತಲಿದೆ. ಮತದಾರರನ್ನು ಸಳೆಯಲು ಈ ರಾತ್ರಿಯೊಂದೇ ಅಭ್ಯರ್ಥಿಗಳಿಗೆ ಉಳಿದಿರುವುದು ಹೀಗಾಗಿ, ಮತದಾರರ ಸೆಳೆಯುವ ಕಸರತ್ತು ಕತ್ತಲಲ್ಲಿ ನಡೆಯುತ್ತಿದೆ. ಹೀಗೆ ಮತದಾರರನ್ನು ತಲುಪಬೇಕಿದ್ದ ಹಣ ಅಧಿಕಾರಿಗಳ ವಶಕ್ಕೆ ಬರುತ್ತಿವೆ.
ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ದೇವಲಾಪುರ ಕಾಲೋನಿ ತೋಟದ ಮನೆಯೊಂದರಲ್ಲಿ ಚುನಾವಣಾಧಿಕಾರಿಗಳು ದಾಳಿ ನಡೆಸಿದಾಗ 50 ಲಕ್ಷ ರೂಪಾಯಿ (Money Found) ಪತ್ತೆಯಾಗಿದೆ.
ತೋಟದ ಮನೆಗೆ ಬಂದ ಅಧಿಕಾರಿಗಳೊಂದಿಗೆ ಸ್ಥಳೀಯರು ಮಾತನಾಡುತ್ತ ನಿಂತಿದ್ದಾರೆ. ಈ ಸಂದರ್ಭದಲ್ಲಿ ಶೋಧ ನಡೆಸಿದ ಅಧಿಕಾರಿಗಳು ಕಂತೆ ಕಂತೆ ಹಣವನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಗ್ ನಲ್ಲಿ ಇಟ್ಟಿದ್ದ 50 ಲಕ್ಷ ರೂ. ಸದ್ಯ ಅಧಿಕಾರಿಗಳ ವಶವಾಗಿದೆ. ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








