ಬೆಳಗಾವಿ : ಸರ್ ದಯವಿಟ್ಟ ಬಸ್ ಸಂಚಾರ ನಿಲ್ಲಿಸಿ ಎಂದು ಪ್ರತಿಭಟನಾ ನಿರತ ರೈತನೊಬ್ಬ ಅಧಿಕಾರಿಯ ಕಾಲಿಗೆ ಬಿದ್ದ ಪ್ರಸಂಗ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ರೈತ ಮುಖಂಡ ಚೂನಪ್ಪ ಅವರು, ಬಸ್ ಸಂಚಾರ ನಿಲ್ಲಿಸುವಂತೆ NWKSRTC ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಕಾಲಿಗೆ ಬಿದ್ದಿದ್ದಾರೆ.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ರೈತರು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದು, ಬೆಳಗಾವಿಯಲ್ಲಿ ಆರಂಭದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ : ಅಶೋಕ್ ಗಸ್ತಿ ಕುಟುಂಬದ ಜತೆ ಬಿಜೆಪಿ ಇದೆ: ಕಟೀಲ್
ಪ್ರತಿಭಟನಾಕಾರರು ತೆರಳಿದ ಮೇಲೆ ಪೊಲೀಸ್ ಲೀಸ್ ಭದ್ರತೆಯಲ್ಲಿ ಬಸ್ಸುಗಳ ಸಂಚಾರ ಆರಂಭಿಸಲಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನಪ್ಪ, ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಎನ್ ಡಬ್ಯುಕೆಎಸ್ ಆರ್ ಟಿಸಿ ಡಿಸಿ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಇಂದು ರೈತರು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಇದು ಬಹುತೇಕ ಯಶಸ್ವಿಯಾಗಿದೆ.








