BJP | ದೇಶದ ಸಂಪತ್ತನ್ನು ಲೂಟಿ ಮಾಡಿದ್ದೇ ನಕಲಿ ಗಾಂಧಿ ಕುಟುಂಬ
ಬೆಂಗಳೂರು : ದೇಶದ ಸಂಪತ್ತನ್ನು ಲೂಟಿ ಮಾಡಿದ್ದೇ ನಕಲಿ ಗಾಂಧಿ ಕುಟುಂಬ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ, ಪ್ರಧಾನಿ ನರೇಂದ್ರ ಮೋದಿ ಏನೂ ಮಾಡದೇ ಲೋಕಸಭೆಯಲ್ಲಿ ಭಾಷಣ ಮಾಡ್ತಾರೆ. ಮೋದಿ ದೇಶ ಹಾಳು ಮಾಡುತ್ತಿದ್ದಾರೆ. ಅವರಿಂದ ದೇಶ ದಿವಾಳಿಯಾಗಿದೆ ಎಂದು ಹೇಳಿಕೆಗೆ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಘಟಕ ತಿರುಗೇಟು ನೀಡಿದೆ.
ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ…
ಮಾನ್ಯ ಸಿದ್ದರಾಮಯ್ಯನವರೇ, ದಿವಾಳಿಯಾಗಿದ್ದು ದೇಶವಲ್ಲ ಕಾಂಗ್ರೆಸ್ ಪಕ್ಷ. ಮೋದಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಒಂದೊಂದೇ ರಾಜ್ಯವನ್ನು ಕೈಚೆಲ್ಲುತ್ತಿದೆ ಎಂದು ಕುಟುಕಿದೆ. ಅಲ್ಲದೇ ದೇಶದ ಸಂಪತ್ತನ್ನು ಲೂಟಿ ಮಾಡಿದ್ದೇ ನಕಲಿ ಗಾಂಧಿ ಕುಟುಂಬ. ಅಂದಹಾಗೆ, ಯುಪಿಎ ಕಾಲದಲ್ಲೇನು ಬಂಗಾರವನ್ನು ರಸ್ತೆ ಬದಿಯಲ್ಲಿ ಸೇರು ಲೆಕ್ಕದಲ್ಲಿ ಮಾರುತ್ತಿದ್ದರೇ ಎಂದು ಪ್ರಶ್ನಿಸಿದೆ.









