KPCC | ಅತ್ತು ಕರೆದು ಔತಣ ಮಾಡಿಸಿಕೊಂಡು ಎಂಥ ಮಾತಾಡಿಬಿಟ್ಟಿರಿ ಮಿಸ್ಟರ್ ನಲಪಾಡ್
ಬೆಂಗಳೂರು : ಅತ್ತು ಕರೆದು ಔತಣ ಮಾಡಿಸಿಕೊಂಡು ಎಂಥ ಮಾತಾಡಿಬಿಟ್ಟಿರಿ ಮಿಸ್ಟರ್ ನಲಪಾಡ್ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. Karnataka bjp KPCC Mohmad nalapad saaksha tv
ಮೊಹಮ್ಮದ್ ನಲಪಾಡ್ ಅವರನ್ನು ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಲಪಾಡ್, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ ಎಂದಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟಿರುವ ಬಿಜೆಪಿ, ಅತ್ತು ಕರೆದು ಔತಣ ಮಾಡಿಸಿಕೊಂಡು ಎಂಥ ಮಾತಾಡಿಬಿಟ್ಟಿರಿ ಮಿಸ್ಟರ್ ನಲಪಾಡ್. ಮೊದಲು ಡಿಕೆಶಿ ಅವರನ್ನು ಸಿಎಂ ಮಾಡೋಕೆ ಸಿದ್ದರಾಮಯ್ಯ ಅವರು ಬಿಡುತ್ತಾರೆಯೇ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಿ. ಆಮೇಲೆ ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿ.
ಅಧಿಕಾರ ಸ್ವೀಕಾರ ಮಾಡಿದ ದಿನವಾದರೂ ಸ್ವಲ್ಪ ಒಳ್ಳೆಯ ಯೋಚನೆ ಮಾಡಿ. ನೀವು ಪ್ರಸ್ತಾಪ ಮಾಡಿದ ವಿಚಾರ ಕೈ ಗೂಡುವುದಿಲ್ಲ ಎಂದು ಅರ್ಥವಾಗಿ ಎಂತೆಂತವರೋ ಮೂಲೆಗುಂಪಾಗಿದ್ದಾರೆ. ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸುವುದು ಮರಳುಗಾಡಿನಲ್ಲಿ ಮರಿಚೀಕೆಯನ್ನು ಹಿಡಿದಂತೆ. ಎಂದಿಗೂ ಕೈಗೂಡದು ಎಂದು ಕುಟುಕಿದೆ









