Karnataka BJP : ಬಿಜೆಪಿಯಿಂದಾಗಿ ಕರ್ನಾಟಕಕ್ಕೆ ‘ಕಳಂಕಿತ ರಾಜ್ಯ’ ಅನ್ನೊ ಬಿರುದು – ಡಿಕೆಶಿ
ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ‘ಕಳಂಕಿತ ರಾಜ್ಯ’ ಅನ್ನೊ ಬಿರುದು ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿರ್ಧಾರ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಐಟಿ-ಬಿಟಿ, ಕೆಂಪೇಗೌಡರ ನಾಡು ಅಂತ ಕರೆಯುತ್ತಿದ್ದ ನಮ್ಮ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ಈ ಗತಿ ಬಂದಿದೆ.
ಇಂದು ಕರ್ನಾಟಕವು ಪ್ರತಿಯೊಂದು ವಿಚಾರದಲ್ಲೂ ಭ್ರಷ್ಟಾಚಾರ ನಡೆಯುವ ರಾಜ್ಯವಾಗಿದೆ. ಈಗ ವೋಟರ್ ಐಡಿ ವಿಚಾರದಲ್ಲೂ ಆಕ್ರಮ ನಡೆದಿದ್ದು, ಜನರು ತಮ್ಮ ಮತದಾನದ ಹಕ್ಕನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕೇಂದ್ರ ಚುನಾವಣಾ ಆಯೋಗಕ್ಕೂ ವೋಟರ್ ಐಡಿ ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ದೂರು ನೀಡಿದ್ದೇವೆ. ಅದರಂತೆ ಉಪ ಆಯುಕ್ತರು ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
karnataka-bjp-named-tainted-state-for-karnataka-due-to-bjp-dk