BJP | ಮುಂದೆ ಕನಕಪುರದಲ್ಲೂ ಸಿದ್ದರಾಮಯ್ಯ ಹವಾ ಮೂಡಿಸುವರೇ?
ಬೆಂಗಳೂರು : ಮುಂದೆ ಕನಕಪುರದಲ್ಲೂ ಸಿದ್ದರಾಮಯ್ಯ ಹವಾ ಮೂಡಿಸುವರೇ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರ “ ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ. ಅವರೇ ಮುಖ್ಯಮಂತ್ರಿ ಆಗಬೇಕು ಹೇಳಿಕೆಗೆ ಬಿಜೆಪಿ ಕಾಮೆಂಟ್ ಮಾಡಿದೆ.

ಬಿಜೆಪಿ ಟ್ವಿಟ್ಟರ್ ನಲ್ಲಿ…
ಮೊದಲೆಲ್ಲ, ಕಾಂಗ್ರೆಸ್ ನಾಯಕರ ಕಾರ್ಯಕ್ರಮ ಡಿಕೆಶಿ ಪರವಾಗಿರುತ್ತಿತ್ತು. ಈಗ ಆ ಕಾರ್ಯಕ್ರಮಗಳು ಸಿದ್ದರಾಮಯ್ಯ ಪರವಾಗಿ ರೂಪುಗೊಳ್ಳುತ್ತಿವೆ. ಶಾಸಕರ ಧ್ವನಿಗಳೂ ಸಿದ್ದರಾಮಯ್ಯ ಪರವಾಗಿ ಮೊಳಗುತ್ತಿದೆ. ಮುಂದೆ ಕನಕಪುರದಲ್ಲೂ ಸಿದ್ದರಾಮಯ್ಯ ಹವಾ ಮೂಡಿಸುವರೇ ಎಂದು ಪ್ರಶ್ನಿಸಿದೆ.
ಡಿಕೆಶಿ ಅವರೇ ನೀವು ಹೇಳಿದಂತೆಯೇ ಆಗಲಿದೆ.
ನೀವು ಊಟ ತಯಾರಿಸಿಡಿ, ಊಟ ಮಾಡಲು ಬೇರೆಯವರು ತುದಿಗಾಲಲ್ಲಿ ನಿಂತಿದ್ದಾರೆ.
ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು!#ಅಸಹಾಯಕಡಿಕೆಶಿ
— BJP Karnataka (@BJP4Karnataka) May 29, 2022
ಡಿಕೆಶಿ ಅವರೇ ನೀವು ಹೇಳಿದಂತೆಯೇ ಆಗಲಿದೆ. ನೀವು ಊಟ ತಯಾರಿಸಿಡಿ, ಊಟ ಮಾಡಲು ಬೇರೆಯವರು ತುದಿಗಾಲಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ಅಸಹಾಯಕ ಎನಿಸಿಕೊಳ್ಳಬಾರದಿತ್ತು ಎಂದು ಬಿಜೆಪಿ ಕುಟುಕಿದೆ.Karnataka bjp-siddaramaiah d k shivakumar








