BJP | ಸಿದ್ದರಾಮಯ್ಯ ಎಲ್ಲೇ ಹೋದ್ರೂ ಜನ ತಿರಸ್ಕರಿಸೋದು ನಿಶ್ಚಿತ Karnataka bjp- slams siddaramaiah
ಬೆಂಗಳೂರು : ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಲಾಪ ಮೊಟಕುಗೊಳಿಸಿದರೆ ಜನರ ಬಳಿ ಹೋಗುತ್ತೇವೆ ಎಂದು ಬೆದರಿಕೆ ಹಾಕುತ್ತಿರುವ ಸಿದ್ದರಾಮಯ್ಯನವರೇ, ನೀವು ಯಾವ ಕ್ಷೇತ್ರದ ಜನರ ಬಳಿ ಹೋಗುತ್ತೀರಿ? ‘
ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಸ್ಪಷ್ಟತೆಯೇ ಇಲ್ಲದ ನಿಮಗೆ ಹೋರಾಟವೇಕೆ? ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತ.
ಎಚ್.ಡಿ. ದೇವೇಗೌಡ, ಬಿಎಸ್‌ವೈ ಅವರಿಂದ ಹಿಡಿದು ಎಲ್ಲ ನಾಯಕರನ್ನು ಏಕವಚನದಲ್ಲಿ ಮಾತನಾಡಿಸುವ @siddaramaiah ಅವರಿಗೆ ರಾಜಕೀಯ ಶಿಷ್ಟಾಚಾರವೇ ತಿಳಿದಿಲ್ಲ.
ತುಚ್ಛವಾಗಿ ಮಾತನಾಡಿ ನಂತರ ನಾನು ಗ್ರಾಮೀಣ ಪ್ರದೇಶದವ ಎಂಬ ಗುರಾಣಿ ಹಿಡಿಯುವ ಸಿದ್ದರಾಮಯ್ಯ ಅವರನ್ನು, ಜನ ಹೋದಲೆಲ್ಲ ತಿರಸ್ಕರಿಸುತ್ತಿದ್ದಾರೆ.#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) February 19, 2022
ಎಚ್.ಡಿ. ದೇವೇಗೌಡ, ಬಿಎಸ್‌ವೈ ಅವರಿಂದ ಹಿಡಿದು ಎಲ್ಲ ನಾಯಕರನ್ನು ಏಕವಚನದಲ್ಲಿ ಮಾತನಾಡಿಸುವ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಿಷ್ಟಾಚಾರವೇ ತಿಳಿದಿಲ್ಲ.
ತುಚ್ಛವಾಗಿ ಮಾತನಾಡಿ ನಂತರ ನಾನು ಗ್ರಾಮೀಣ ಪ್ರದೇಶದವ ಎಂಬ ಗುರಾಣಿ ಹಿಡಿಯುವ ಸಿದ್ದರಾಮಯ್ಯ ಅವರನ್ನು, ಜನ ಹೋದಲೆಲ್ಲ ತಿರಸ್ಕರಿಸುತ್ತಿದ್ದಾರೆ ಎಂದು ಟೀಕೆ ಮಾಡಿದೆ.








