Karnataka Budget 2021 Live : ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರು 2021 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ, ಹಸಿರೆಲೆ ಗೊಬ್ಬರಕ್ಕೆ 10 ಕೋಟಿ, ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಕೆ ಪರಿಹಾರ ಬೆಲೆ ಪೆÇ್ರೀತ್ಸಾಹಕ್ಕೆ 25 ಕೋಟಿ ರೂಪಾಯಿ ಘೋಷಿಸಿದ್ದಾರೆ.
ಇದಲ್ಲದೆ ಹೊರ ರಾಜ್ಯದ ದೇಶಿ ತಳಿಗಳಾದ ಗಿರ್, ಸಾಹಿವಾಲ್, ಒಂಗೋಲ್, ಥಾರ್ ಪಾರ್ಕರ್ ಮತ್ತು ದೇವಣಿ ತಳಿಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ರೈತರಿಗೆ ಪರಿಚಯಿಸುವ ಉದ್ದೇಶದಿಂದ ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ. ಜೊತೆಗೆ ಪ್ರತಿ ಜಿಲ್ಲೆಗೆ ಒಂದರಂತೆ ಗೋ ಶಾಲೆ ಸ್ಥಾಪನೆ ಮಾಡಲು ಕ್ರಮ ಸರ್ಕಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.