Karnataka Budget 2023 : ಈ ಬಜೆಟ್ ಅನ್ನ ಕೇವಲ ಶೋಕೇಸ್ ನಲ್ಲಿ ಇಡಬಹುದು…
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಕೊನೆಯ ಬಜೆಟ್ ಅನ್ನ ಮಂಡಿಸಿದ್ದಾರೆ. ಈ ಕುರಿತು ವಿಪಕ್ಷ ನಾಯಕರುಗಳ ಪ್ರತಿಕ್ರಿಯೆ ಈಗ ಹೊರಲಾಸರಂಭಿಸಿವೆ. ಬಜೆಟ್ ಕುರಿತು ಪ್ರತಿಕ್ರಿಸಿರುವ ಡಿ ಕೆ ಶಿವಕುಮಾರ್ ಈ ಬಜೆಟ್ ಅನ್ನ ಶೋಕೇಸ್ ನಲ್ಲಿ ಇಡಬಹುದು ಎಂದು ಹೇಳಿದ್ದಾರೆ.
“ಹಿಂದಿನ ಬಜೆಟ್ನಲ್ಲಿ ಮಾಡಿದ ಘೋಷಣೆಗಳಲ್ಲಿ ಶೇ.50 ರಷ್ಟು ಕೂಡ ಜಾರಿಗೆ ತಂದಿಲ್ಲ, ಅವರ ಪ್ರಣಾಳಿಕೆಯಲ್ಲಿ 600 ಆಶ್ವಾಸನೆಗಳಿದ್ದವು. ಈಗಲಾದರೂ ಈಡೇರಿಸುತ್ತೇವೆ ಎಂದು ಭಾವಿಸಿದ್ದೆವು ಈಗಲೂ ಮಾಡಿಲ್ಲ. ಜನರನ್ನ ಮೂರ್ಖರನ್ನಾಗಿಸುತ್ತಿದ್ದಾರೆ. ಅದಕ್ಕಾಗಿಯೇ ನಾವು ಪ್ರತಿಭಟನೆಯ ಸಂಕೇತವಾಗಿ ನಮ್ಮ ಕಿವಿಯಲ್ಲಿ ಹೂವುಗಳನ್ನ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.
ನಮ್ಮ ಪ್ರಚಾರದ ವೇಳೆ ಕುಟುಂಬದ ಒಬ್ಬ ಮಹಿಳಾ ಮುಖ್ಯಸ್ಥರಿಗೆ ರೂ 2,000 ನೀಡುವುದಾಗಿ ಭರವಸೆ ನೀಡಿದ್ದೆವು. ಬಿಪಿಎಲ್ ಕುಟುಂಬದ ಮಹಿಳೆಯರಿಗೆ 500 ರೂ.ಗಳನ್ನು ಘೋಷಿಸಿದ್ದಾರೆ. ಮೂರೂವರೆ ವರ್ಷ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಅವರು ಈ ಬಜೆಟ್ ಅನ್ನು ಸಹ ಜಾರಿಗೆ ತರಲು ಸಾಧ್ಯವಿಲ್ಲ.
ಈ ಬಜೆಟ್ ಯಾರಿಗೂ ಅಥವಾ ಯಾವುದೇ ಕ್ಷೇತ್ರಕ್ಕೆ ಸಹಾಯ ಮಾಡುವುದಿಲ್ಲ. ‘ಡಬಲ್ ಇಂಜಿನ್’ ಕೆಲಸ ಮಾಡುತ್ತಿಲ್ಲ. ಹೊಗೆ ಮಾತ್ರ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಜೆಟ್ ಅನ್ನು ಪ್ರದರ್ಶನದಲ್ಲಿ ಇಡಬಹುದು ಎಂದು ಡಿ ಕೆ ಶಿ ಹೇಳಿದ್ದಾರೆ.
Karnataka Budget 2023 : CM Bommai can keep this Budget in a showcase, says DK Shivakumar








