ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಾಟ, ರೈತರ ಪ್ರತಿಭಟನೆ ನಡುವೆ ಸಂಪುಟ ವಿಸ್ತರಣೆ, ಪುನರ್ ರಚನೆ ಕಸರತ್ತು ಜೋರಾಗಿದೆ.
ಈ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತೊಮ್ಮೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಗುರುವಾರದ ಸಚಿವ ಸಂಪುಟ ಸಭೆಯ ಬಳಿಕ ದೆಹಲಿಯಾತ್ರೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಈ ಮಧ್ಯೆ ಸಚಿವ ಸಿ.ಟಿ ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಹಿನ್ನೆಲೆ ಅವರು ಅಕ್ಟೋಬರ್ ಮೊದಲ ವಾರದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಸದ್ಯಕ್ಕೆ ಆರು ಸಚಿವ ಸ್ಥಾನ ಖಾಲಿ ಇದ್ದು, 4 ಸಚಿವರನ್ನು ಕೈ ಬಿಟ್ಟರೇ ಖಾಲಿ ಸ್ಥಾನಗಳ ಸಂಖ್ಯೆ 10ಕ್ಕೆ ಏರಲಿದೆ.
ಇದನ್ನೂ ಓದಿ : ಇನ್ಮುಂದೆ ಮಾಸ್ಕ್ ಹಾಕದಿದ್ದರೆ 1000 ರೂ ದಂಡ, 1 ವರ್ಷ ಜೈಲು
ಈ 10ರ ಪೈಕಿ 2 ಸ್ಥಾನಗಳನ್ನು ಉಳಿಸಿ 8 ಸ್ಥಾನಗಳನ್ನು ತುಂಬಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಕೊಡೋದು ಯಾರು..?
ಸಿ.ಟಿ ರವಿ
ಶಶಿಕಲಾ ಜೊಲ್ಲೆ
ಶ್ರೀನಿವಾಸ ಪೂಜಾರಿ
ಸಿ.ಸಿ ಪಾಟೀಲ್
ಮೂಲಗಳ ಪ್ರಕಾರ 6+2 ಸೂತ್ರದಲ್ಲಿ ಅಂದರೆ ಇಬ್ಬರು ವಲಸಿಗಳು ಮತ್ತು ಆರು ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ದೊರಕಿಲಿದೆಯಂತೆ.







