Karnataka Cabinet ಎಸ್ ಸಿ – ಎಸ್ ಟಿ ಮೀಸಲಾತಿ ಏರಿಕೆಗೆ ಸುಗ್ರೀವಾಜ್ಞೆ
ಬೆಂಗಳೂರು : ಸುಗ್ರೀವಾಜ್ಞೆ ಮೂಲಕ ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಸಂಪುಟ ಸಭೆಯಲ್ಲಿ ಎಸ್ ಸಿ- ಎಸ್ ಟಿ ಮೀಸಲಾತಿ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ.
ಕಾನೂನು ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಇಲಾಖೆಯ ಸಲಹೆಯಂತೆ ಸುಗ್ರೀವಾಜ್ಞೆಗೆ ತೀರ್ಮಾನ ಮಾಡಲಾಗಿದೆ.

ಎಸ್ ಸಿಯಲ್ಲಿ 103 ಜಾತಿಗಳು ಬರುತ್ತವೆ. ಮೊದಲು ಕೇವಲ ಆರು ಜಾತಿಗಳು ಮಾತ್ರ ಇದ್ದವು. ಎಸ್ ಟಿಯಲ್ಲಿ ಮೂರು ಜಾತಿಗಳು ಮಾತ್ರ ಇದ್ದವು, ಈಗ 56 ಜಾತಿಗಳಿವೆ ಎಂದು ತಿಳಿಸಿದರು.
ಇನ್ನು ಸಂಪುಟ ಸಭೆಯಲ್ಲಿ ಕರ್ನಾಟಕ ಕೃಷಿ ಸೇವೆಗಳ ನೇಮಕಾತಿಗೆ ತಿದ್ದುಪಡಿ, ೨೯೩ ಸಂಚಾರಿ ಘಟಕಗಳ ನಿರ್ವಹಣೆ ಗುತ್ತಿಗೆಗೆ ಒಪ್ಪಿಗೆ, ಕಾಗವಾಡದ ೨೩ ಕೆರೆಗಳಿಗೆ ನೀರು ತುಂಬುವ ಯೋಜನೆ ಸೇರಿದಂತೆ ಹಲವು ವಿಷಯಗಳಿಗೆ ಒಪ್ಪಿಗೆ ನೀಡಲಾಗಿದೆ.
ಅಲ್ಲದೆ ರಾಯಚೂರು ವಿವಿ ಮೂಲಸೌಕರ್ಯಕ್ಕೆ ೧೫ ಕೋಟಿ ಅನುದಾನ ನೀಡಲು ಸಂಪುಟ ಸಮ್ಮತಿಸಿದೆ.








