ರಾಜ್ಯದಲ್ಲಿ ಲಾಕ್ ಡೌನ್ ಪಕ್ಕಾ : ಸರ್ಕಾರದ ಪ್ರಧಾನ ಕಾರ್ಯದರ್ಶಿ ಸುಳಿವು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ತಪ್ಪಿದ್ದು, ಪರಿಸ್ಥಿತಿ ಕೈ ಮೀರಿ ಹೋಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್ ಪ್ರತಿಕ್ರಿಯೆ ನೀಡಿ, ಎಲ್ಲರೂ ಲಾಕ್ ಡೌನ್ ಬೆಸ್ಟ್ ಅಂತಿದಾರೆ,
ಸರ್ಕಾರನೂ ಹಂಗೇ ಮಾಡಬೇಕು ಅಂತಿದೆ. ಆದರೆ ಜನ ಒಪ್ಪಬೇಕಲ್ಲ ಎಂದು ಹೇಳುವ ಮೂಲಕ ಲಾಕ್ ಡೌನ್ ಸುಳಿವು ನೀಡಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಲಾಕ್ ಡೌನ್ ಬೆಸ್ಟ್ ಅಂತಿದ್ದಾರೆ, ಸರ್ಕಾರ ಕೂಡ ಲಾಕ್ ಡೌನ್ ಮಾಡಬೇಕು ಅಂತಿದೆ.
ಆದರೆ ಜನರೇ ಬೇಡ ಎನ್ನುತ್ತಿದ್ದಾರೆ. ಜನರಿಗೆ ಮಾಮೂಲಾಗಿರಬೇಕು, ಆರಾಮವಾಗಿರಬೇಕು. ಯಾರು ಸಾಯುತ್ತಿದ್ದಾರೋ ಸಾಯಲಿ ಎನ್ನುವ ರೀತಿಯಲ್ಲಿ ಮಾತನಾಡಿದರೆ ನಾವೇನು ಮಾಡಲು ಸಾಧ್ಯ ಎಂದು ಹೇಳಿದರು.
ಇನ್ನು ಲಾಕ್ ಡೌನ್ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪನವರು ತೀರ್ಮಾನ ಮಾಡ್ತಾರೆ.
ಕ್ಯಾಬಿನೆಟ್ ಸಭೆ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಇದೇ ವೇಳೆ ಕಂದಾಯ ಸಚಿವ ಆರ್.ಅಶೊಕ್ ತಿಳಿಸಿದ್ದಾರೆ.










