Congress | ಕಾಂಗ್ರೆಸ್ಸಿಗರೇ, ನಕಲಿ ಗಾಂಧಿ ಕುಟುಂಬದ ಪಾದಪೂಜೆ ಬಿಡಿ
ಬೆಂಗಳೂರು : ಕಾಂಗ್ರೆಸ್ಸಿಗರೇ, ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡುವುದನ್ನು ಬಿಟ್ಟು ವಾಸ್ತವ ಸಂಗತಿಗಳತ್ತ ಗಮನಹರಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಸುಳ್ಳಿನ ಇಟ್ಟಿಗೆಯ ಮೇಲೆ ಸತ್ಯದ ಸಮಾಧಿ ಮಾಡುವುದಕ್ಕೆ ಕಾಂಗ್ರೆಸ್ ಹೊರಟಿದೆ. ದೇಶದಲ್ಲಿ ಉನ್ನತ ಶಿಕ್ಷಣವನ್ನು ಉಳ್ಳವರ ಸ್ವತ್ತಾಗಿ ಮಾಡಿದ ಕಾಂಗ್ರೆಸಿಗರು ಈಗ ವೈದ್ಯ ಹಾಗೂ ತಾಂತ್ರಿಕ ಶಿಕ್ಷಣ ಕ್ಷೇತ್ರದ ಸುಧಾರಣೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದೆ.
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಸಗಿ ಲಾಬಿಗೆ ಮಣೆ ಹಾಕಿದ್ದು ಯಾರು?
– ಕಾಂಗ್ರೆಸ್
ಯಾವ ಪಕ್ಷದ ರಾಜಕೀಯ ನಾಯಕರ ಹೆಸರಿನಲ್ಲಿ ಬೃಹತ್ ವೈದ್ಯ ಹಾಗೂ ತಾಂತ್ರಿಕ ಖಾಸಗಿ ವಿದ್ಯಾ ಸಂಸ್ಥೆಗಳಿವೆ?
- ಕಾಂಗ್ರೆಸ್
ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮದೇ ಸಾಮ್ರಾಜ್ಯ ಸೃಷ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಆದಾಯ ಎಷ್ಟು ಹೆಚ್ಚಳವಾಗಿದೆ? ಬಡ ವಿದ್ಯಾರ್ಥಿಗಳಿಗೆ ಅವರು ನೀಡಿದ ಸೀಟ್ ಎಷ್ಟು? ಶುಲ್ಕ ರಿಯಾಯಿತಿ ಎಷ್ಟು? ಈ ಬಗ್ಗೆ ಮಾತನಾಡಲು ಇದು ಸಕಾಲ!
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ.
ಕೇವಲ 7 ವರ್ಷದಲ್ಲಿ 207 ಹೊಸ ವೈದ್ಯ ಕಾಲೇಜು ಆರಂಭಿಸಿ ಸರ್ಕಾರಿ ಕೋಟಾದ ಸೀಟುಗಳನ್ನು ಹೆಚ್ಚಿಸಲಾಗಿದೆ.
ಪ್ರತಿಭಾ ಪಲಾಯನ ತಡೆಯಲು ಮೋದಿ ಸರ್ಕಾರ ದೃಢ ಹೆಜ್ಜೆಯಿರಿಸಿದೆ.
ಕಾಂಗ್ರೆಸ್ ಕೊಡುಗೆ ಏನು?#SpeakUpCONgress
— BJP Karnataka (@BJP4Karnataka) March 3, 2022
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಕೇವಲ 7 ವರ್ಷದಲ್ಲಿ 207 ಹೊಸ ವೈದ್ಯ ಕಾಲೇಜು ಆರಂಭಿಸಿ ಸರ್ಕಾರಿ ಕೋಟಾದ ಸೀಟುಗಳನ್ನು ಹೆಚ್ಚಿಸಲಾಗಿದೆ. ಪ್ರತಿಭಾ ಪಲಾಯನ ತಡೆಯಲು ಮೋದಿ ಸರ್ಕಾರ ದೃಢ ಹೆಜ್ಜೆಯಿರಿಸಿದೆ.ಕಾಂಗ್ರೆಸ್ ಕೊಡುಗೆ ಏನು?
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಸಗಿ ಲಾಬಿಗೆ ಮಣೆ ಹಾಕಿದ್ದು ಯಾರು?
– ಕಾಂಗ್ರೆಸ್ಯಾವ ಪಕ್ಷದ ರಾಜಕೀಯ ನಾಯಕರ ಹೆಸರಿನಲ್ಲಿ ಬೃಹತ್ ವೈದ್ಯ ಹಾಗೂ ತಾಂತ್ರಿಕ ಖಾಸಗಿ ವಿದ್ಯಾ ಸಂಸ್ಥೆಗಳಿವೆ?
- ಕಾಂಗ್ರೆಸ್ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ.#SpeakUpCONgress
— BJP Karnataka (@BJP4Karnataka) March 3, 2022
ಕಾಂಗ್ರೆಸ್ ಅವಧಿಯ 5 ದಶಕಗಳಿಗೂ ಮೀರಿದ ಅವಧಿಯಲ್ಲಿ ಆಗದೇ ಇದ್ದದ್ದು, ಕೇವಲ ಏಳು ವರ್ಷದಲ್ಲಿ ಮೋದಿ ಸರ್ಕಾರ ಮಾಡಿ ತೋರಿಸಿದೆ. ಶೇ. 54 ರಷ್ಟು ಹೊಸ ಮೆಡಿಕಲ್ ಕಾಲೇಜುಗಳು ಹೆಚ್ಚಳವಾಗಿದೆ. ಕಾಂಗ್ರೆಸ್ಸಿಗರೇ, ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡುವುದನ್ನು ಬಿಟ್ಟು ವಾಸ್ತವ ಸಂಗತಿಗಳತ್ತ ಗಮನಹರಿಸಿ ಎಂದು ಬಿಜೆಪಿ ಕುಟುಕಿದೆ.
Karnataka congress- BJP Tweet war








