ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಮೈಸೂರು ರಾಜ ಮನೆತನಕ್ಕೆ ಅವಮಾನ
ಬೆಂಗಳೂರು : ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಮೈಸೂರು ರಾಜ ಮನೆತನಕ್ಕೆ ಅವಮಾನ ಮಾಡಿದ್ದು ನಿಜವಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಪಠ್ಯ ಪರಿಷ್ಕರಣೆ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ತಾಜ್ ಹೋಟೆಲ್ ಮೇಲೆ ನಡೆದ ಉಗ್ರ ದಾಳಿಯಲ್ಲಿ ರಾಜ್ಯದ ಹೆಮ್ಮೆಯ ಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ದೇಶಕ್ಕಾಗಿ ಪ್ರಾಣ ತೆತ್ತರು. ಇವರ ತ್ಯಾಗ ಬಲಿದಾನ ನೆನೆಯುವ ನಿಟ್ಟಿನಲ್ಲಿ 8ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಪಾಠವಿತ್ತು. ಸಿದ್ದರಾಮಯ್ಯ ಸರ್ಕಾರ ಆ ಪಾಠ ಕೈಬಿಟ್ಟಿದ್ದು ಯೋಧ ಪರಂಪರೆಗೆ ಅವಮಾನವಲ್ಲವೇ?

ಕಾಂಗ್ರೆಸ್ ಸರ್ಕಾರ ನೇಮಿಸಿದ ಸಮಿತಿಯ ಸಾಧನೆ √ ಅಂಬೇಡ್ಕರ್ ಪಠ್ಯ ತಿರಸ್ಕಾರ √ ನಾಡಪ್ರಭು ಕೆಂಪೇಗೌಡ ಪಠ್ಯಕ್ಕೆ ಜಾಗ ಇರಲಿಲ್ಲ √ ನೇಗಿಲಯೋಗಿ ಪದ್ಯಕ್ಕೆ ಅವಕಾಶವಿಲ್ಲ √ ಸಿಂಧೂ ನಾಗರಿಕತೆ ಪಾಠವೇ ಇಲ್ಲ. ನೆಹರೂ, ಇಂದಿರೆಗೆ ಬರೆದ ಪತ್ರವನ್ನು ಅನಾವಶ್ಯಕವಾಗಿ ತುರುಕಿಸಲಾಗಿದೆ. ಇವರ ಉದ್ದೇಶವೇನಿತ್ತು ಎಂದು ಪ್ರಶ್ನೆ ಮಾಡಿದೆ.
√ ರಾಮಾಯಣದ ಬಗೆಗಿನ ಪಠ್ಯ ತೆಗೆದು ಇಸ್ಲಾಮಿಕ್ ಮತ್ತು ಸೂಫಿ ಪಂಥದ ಪಠ್ಯ ಸೇರಿಸಲಾಗಿತ್ತು. √ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ವೈಭವೀಕರಣೆ. √ ಸನಾತನ ಸಂಸ್ಕೃತಿಯ ಬಗ್ಗೆ ಕೀಳರಿಮೆ ಬರುವಂತಹ ಬರಹ ಸೇರ್ಪಡೆ. ಇದೆಲ್ಲ ಮಾಡಿದ್ದು ಬಿಜೆಪಿ ನೇಮಿಸಿದ ಸಮಿತಿಯಲ್ಲ, ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ಸಮಿತಿ.
ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ಸಮಿತಿ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಮೈಸೂರು ಒಡೆಯರ್ ವಂಶಸ್ಥರ ಪಠ್ಯಕ್ಕೆ ಕತ್ತರಿ ಹಾಕಿತ್ತು. ಅದೇ ಸಮಿತಿ ಟಿಪ್ಪುವನ್ನು ವೈಭವೀಕರಿಸಿ, ಹೆಚ್ಚಿನ ಪುಟ ಸೇರಿಸಿತ್ತು. ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಮೈಸೂರು ರಾಜ ಮನೆತನಕ್ಕೆ ಅವಮಾನ ಮಾಡಿದ್ದು ನಿಜವಲ್ಲವೇ ಎಂದು ಹಿಜೆಪಿ ಕುಟುಕಿದೆ. Karnataka congress siddaramaiah vs bjp








