Congress | ಬಿಜೆಪಿ ಬಿತ್ತಿದ ದ್ವೇಷ ಬೀಜ ಅತಿಯಾಗಿ ಬಿಜೆಪಿಯನ್ನೇ ಸುಡುತ್ತದೆ
ಬೆಂಗಳೂರು : ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವಂತೆ ಬಿಜೆಪಿ ಬಿತ್ತಿದ ದ್ವೇಷ ಬೀಜ ಅತಿಯಾಗಿ ಬಿಜೆಪಿಯನ್ನೇ ಸುಡುತ್ತದೆ, ಇದು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ.
ಪ್ರವೀಣ್ ಹತ್ಯೆ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವಂತೆ ಬಿಜೆಪಿ ಬಿತ್ತಿದ ದ್ವೇಷ ಬೀಜ ಅತಿಯಾಗಿ ಬಿಜೆಪಿಯನ್ನೇ ಸುಡುತ್ತದೆ, ಇದು ನಿಶ್ಚಿತ. ಬಿಜೆಪಿ ಜನೋತ್ಸವ ನಡೆಸುವುದಲ್ಲ, ಜನಾಕ್ರೋಶೋತ್ಸವ ಎದುರಿಸುತ್ತಿದೆ.ಸರ್ಕಾರದ ವೈಫಲ್ಯಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರು ಕನ್ನಡಿ ಹಿಡಿದಿದ್ದಾರೆ.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಯಾರೇ ಸಮಾಜವನ್ನು ಪ್ರಚೋದನೆ ಮಾಡಲು ಪ್ರಯತ್ನಿಸುವವರನ್ನು ಮುಲಾಜಿಲ್ಲದೆ ನಿಗ್ರಹಿಸುವ ಕೆಲಸವನ್ನು ಸರ್ಕಾರ ಮಾಡಬೇಕು.ಇನ್ನಷ್ಟು ಅನಾಹುತಗಳಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕಿದೆ.ಜನೋತ್ಸವ ಎನ್ನುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಜನಾಕ್ರೋಶೋತ್ಸವದ ದರ್ಶನವಾಗಿದೆ.
ಸರ್ಕಾರದ ವೈಫಲ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?
ಬೆಳ್ಳಾರೆಯ ಪ್ರವೀಣ್ ಹತ್ಯೆ ಅತ್ಯಂತ ಆಘಾತಕಾರಿಯಾದುದು, ಪೊಲೀಸರು ಶೀಘ್ರವಾಗಿ ಕೊಲೆಗಾರರನ್ನು ಬಂಧಿಸಿ, ತನಿಖೆ ನಡೆಸಬೇಕು,
ಯಾವುದೇ ಅಹಿತಕರ ವಾತಾವರಣಕ್ಕೆ ಆಸ್ಪದ ಕೊಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು.#BJPBrashtotsava— Karnataka Congress (@INCKarnataka) July 27, 2022
ಸರ್ಕಾರದ ವೈಫಲ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?ಬೆಳ್ಳಾರೆಯ ಪ್ರವೀಣ್ ಹತ್ಯೆ ಅತ್ಯಂತ ಆಘಾತಕಾರಿಯಾದುದು, ಪೊಲೀಸರು ಶೀಘ್ರವಾಗಿ ಕೊಲೆಗಾರರನ್ನು ಬಂಧಿಸಿ, ತನಿಖೆ ನಡೆಸಬೇಕು, ಯಾವುದೇ ಅಹಿತಕರ ವಾತಾವರಣಕ್ಕೆ ಆಸ್ಪದ ಕೊಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು.
ಹರ್ಷ ಹತ್ಯೆ ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ಸಲ್ಲಿಸಿದ ಬಿಜೆಪಿ ಸರ್ಕಾರದ ಅಸಲಿ ಅಜೆಂಡಾ ಏನೆಂದು ಜನತೆ ಅರ್ಥ ಮಾಡಿಕೊಂಡಿದ್ದಾರೆ.ಸರ್ಕಾರದ ಬಿರಿಯಾನಿ ಸೇವೆಯೇ ಕ್ರಿಮಿನಲ್ಗಳಿಗೆ ಭಯದ ಬದಲು ಪ್ರೇರಣೆ ನೀಡುತ್ತಿದೆ.ರಾಜ್ಯದಲ್ಲಿ ಜನಸಾಮಾನ್ಯರ ಬದಲು ಕ್ರಿಮಿನಲ್ಗಳಿಗೆ ರಕ್ಷಣೆ, ಗೌರವ ಸಿಗುತ್ತಿದೆ.
ಸರ್ಕಾರದ ವೈಫಲ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?
ಬೆಳ್ಳಾರೆಯ ಪ್ರವೀಣ್ ಹತ್ಯೆ ಅತ್ಯಂತ ಆಘಾತಕಾರಿಯಾದುದು, ಪೊಲೀಸರು ಶೀಘ್ರವಾಗಿ ಕೊಲೆಗಾರರನ್ನು ಬಂಧಿಸಿ, ತನಿಖೆ ನಡೆಸಬೇಕು,
ಯಾವುದೇ ಅಹಿತಕರ ವಾತಾವರಣಕ್ಕೆ ಆಸ್ಪದ ಕೊಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು.#BJPBrashtotsava— Karnataka Congress (@INCKarnataka) July 27, 2022
ಬಿಜೆಪಿ ಸರ್ಕಾರದ ಅಸಾಮರ್ಥ್ಯ, ದುರಾಡಳಿತ, ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಅವರದ್ದೇ ಪಕ್ಷದ ಕಾರ್ಯಕರ್ತರೆ ರಾಜೀನಾಮೆ ಪತ್ರಗಳ ಮೂಲಕ ಉತ್ತರ ಕೊಡುತ್ತಿದ್ದಾರೆ.ಯಾವ ಮುಖ ಇಟ್ಟುಕೊಂಡು ಉತ್ಸವ ಮಾಡುತ್ತೀರಿ ಬಿಜೆಪಿ ಲಜ್ಜೆಬಿಟ್ಟ ಬಿಜೆಪಿ ಇನ್ನೂ ಸಹ ಬುದ್ದಿ ಕಲಿಯದಿದ್ದರೆ, ಅವರ ಕಾರ್ಯಕರ್ತರೇ ಕಲಿಸುತ್ತಾರೆ ಎಂದು ಬರೆದುಕೊಂಡಿದೆ.








