ಲಜ್ಜೆ ಬಿಟ್ಟವರು ಮಾತ್ರ ಸುಳ್ಳನ್ನು ಸುಲಲಿತವಾಗಿ ಹೇಳಬಲ್ಲರು
ಬೆಂಗಳೂರು : ಲಜ್ಜೆ ಬಿಟ್ಟವರು ಮಾತ್ರ ಸುಳ್ಳನ್ನು ಸುಲಲಿತವಾಗಿ ಹೇಳಬಲ್ಲರು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಬಲ್ ಇಂಜಿನ್ ಸರ್ಕಾರಗಳಿಂದ ವಿಕಾಸ್ ಪರ್ವ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್, ನೆರೆ ಪರಿಹಾರವಿಲ್ಲ, ಕೋವಿಡ್ ಪರಿಹಾರ ಇನ್ನೂ ನೀಡಿಲ್ಲ,

ವಸತಿ ಯೋಜನೆಗಳು ಹಳ್ಳ ಹಿಡಿದಿವೆ, GST ಬಾಕಿ ಇನ್ನೂ ಕೊಟ್ಟಿಲ್ಲ, ರಸ್ತೆ ಗುಂಡಿಗಳನ್ನು ಮುಚ್ಚುವವರಿಲ್ಲ,
ವಿಕಾಸವಿರುವುದು 40% ಕಮಿಷನ್‌ನಲ್ಲಿ ಮಾತ್ರ! ಲಜ್ಜೆ ಬಿಟ್ಟವರು ಮಾತ್ರ ಸುಳ್ಳನ್ನು ಸುಲಲಿತವಾಗಿ ಹೇಳಬಲ್ಲರು ಎಂದು ಆಕ್ರೋಶ ಹೊರಹಾಕಿದೆ.








