Tejasvi surya | ಮನೆ ಮೇಲೆ ಬುಲ್ಡೋಸರ್ ನುಗ್ಗಿಸುವುದು ಯಾವಾಗ ?
ಬೆಂಗಳೂರು : ಸಂಸದರ ಮನೆ ಮೇಲೆ ಬುಲ್ಡೋಸರ್ ನುಗ್ಗಿಸುವುದು ಯಾವಾಗ? ಬೇಗ ತೇಜಸ್ವಿರವರ ಯುಪಿ ಮಾಡೆಲ್ ಆಸೆಯನ್ನು ನೆರವೇರಿಸಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ.
ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ 30 ಬಿಜೆಪಿ ಕಾರ್ಯಕರ್ತರ ವಿರುದ್ಧ ದೆಹಲಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸಾವಿರ ಪುಟಗಳ ಜಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು ಗುಂಪು ಕಟ್ಟಿಕೊಂಡು ಸಾರ್ವಜನಿಕ ಆಸ್ತಿ – ಪಾಸ್ತಿ ನಾಶ ಮಾಡಿರುವ ಆರೋಪ ಹೊರಿಸಲಾಗಿದೆ. ಈ ಸಂಬಂದ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಬಿಜೆಪಿ ಮತ್ತು ಸಂಸದರ ಕಾಲೆಳೆದಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ದೆಹಲಿಯಲ್ಲಿ ದೊಂಬಿ ನಡೆಸಿ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ ಸಂಸದ ತೇಜಸ್ವಿ ಸೂರ್ಯ ಅವರೇ, ಹಿಂದೆ ನೀವೇ ಒತ್ತಾಯಿಸಿದಂತೆ ಈಗ ನಿಮ್ಮ ಮೇಲೆಯೇ ‘ಯುಪಿ ಮಾಡೆಲ್’ ಜಾರಿಯಾಗಬೇಕಲ್ಲವೇ? ಸಂಸದರ ಮನೆ ಮೇಲೆ ಬುಲ್ಡೋಸರ್ ನುಗ್ಗಿಸುವುದು ಯಾವಾಗ? ಆಸ್ತಿ ಮಟ್ಟುಗೋಲು ಯಾವಾಗ ಬಿಜೆಪಿ ಬೇಗ ತೇಜಸ್ವಿರವರ ಯುಪಿ ಮಾಡೆಲ್ ಆಸೆಯನ್ನು ನೆರವೇರಿಸಿ ಎಂದು ಬರೆದುಕೊಂಡಿದೆ.








