Karnataka Electricity | ಮತ್ತೆ ವಿದ್ಯುತ್ ದರ ಏರಿಕೆ ಶಾಕ್ !
ನವರಾತ್ರಿ ಸಂಭ್ರಮದಲ್ಲಿ ಜನರಿಗೆ ಕರೆಂಟ್ ಶಾಕ್
ಇಂಧನ ಹೊಂದಾಣಿಕೆ ಶುಲ್ಕು ಹೆಚ್ಚಳ ಹಿನ್ನೆಲೆ
ಅಕ್ಟೋಬರ್ ಒಂದರಿಂದಲೇ ಬೆಲೆ ಏರಿಕೆ ಸಾಧ್ಯತೆ
ಪ್ರತಿ ಯೂನಿಟ್ ಮೇಲೆ 43 ಪೈಸೆ ಏರಿಕೆ
ಬೆಂಗಳೂರು : ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ.
ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ ನಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.
ಈ ಕುರಿತು ಕೆಇಆರ್ ಸಿ ಹೊರಡಿಸಿರುವ ಆದೇಶದನ್ವಯ ವಿದ್ಯುತ್ ದರ ಪ್ರತಿ ಯೂನಿಟ್ ಗೆ 43 ಪೈಸೆ ಹೆಚ್ಚಾಗಲಿದೆ.
ಮುಂದಿನ ಆರು ತಿಂಗಳ ಅವಧಿಗೆ ಗ್ರಾಹಕರಿಂದ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ.
ಕಳೆದ ಜುಲೈನಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಟು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿತ್ತು.
ಇದೀಗ ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆ ಆದ ಹಿನ್ನೆಲೆಯಲ್ಲಿ 43 ಪೈಸೆ ಹೆಚ್ಚಳ ಮಾಡಲಾಗಿದೆ.
ಈ ಮೊತ್ತವನ್ನು ಅಕ್ಟೋಬರ್ ನಿಂದ ಮುಂದಿನ ಮಾರ್ಚ್ 2023 ರವೆರೆಗೆ ಸಂಗ್ರಹಿಸಲಾಗುತ್ತದೆ.