ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಖಾಲಿಯಾಗಿರುವ ಉಪನ್ಯಾಸಕರ ಹುದ್ದೆಗಳಿಗೆ 2025–26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ನಿಯೋಜಿಸಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ನಿಯಮದಡಿಯಲ್ಲಿ ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ 4689 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು.
ಈ ಹುದ್ದೆಗಳು ಬಡ್ತಿ, ವಯೋನಿವೃತ್ತಿ, ನಿಧನ ಅಥವಾ ಇತರೆ ಕಾರಣಗಳಿಂದ ತೆರವಾದ ಉಪನ್ಯಾಸಕರ ಹುದ್ದೆಗಳಾಗಿದ್ದು, ಇಲ್ಲಿಯವರೆಗೆ ಮಂಜೂರಾಗಿಲ್ಲದ ಕಾರಣದಿಂದಾಗಿ ಈ ತಾತ್ಕಾಲಿಕ ನೇಮಕಾತಿ ಮಾಡಲಾಗುತ್ತಿದೆ. ಸರ್ಕಾರವು ನೀಡಿದ ಆದೇಶದ ಪ್ರಕಾರ, ಈ ಅತಿಥಿ ಉಪನ್ಯಾಸಕರಿಗೆ ಮಾಸಿಕ ರೂ. 14,000/- ಗೌರವಧನ ನೀಡಲಾಗುವುದು.
ಈ ನೇಮಕಾತಿ ಮಾರ್ಚ್ 2026ರ ಅಂತ್ಯದವರೆಗೆ ಜಾರಿಯಲ್ಲಿರಲಿದೆ.
ರಾಜ್ಯದ ಅನೇಕ ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಮನಗಂಡ ಸರ್ಕಾರವು ಈ ತಾತ್ಕಾಲಿಕ ಪರಿಹಾರ ಕ್ರಮ ತೆಗೆದುಕೊಂಡಿದೆ.








