Dr K Sudhakar | ರಾಜ್ಯ ಕಾಂಗ್ರೆಸ್ ನಾಯಕರಿಗೆ ಧೈರ್ಯವಿಲ್ಲವೇ
ಬೆಂಗಳೂರು : ಪಾದಯಾತ್ರೆಯ ಬೀದಿನಾಟಕ ಮಾಡಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಿಗೆ ತಮ್ಮ ಮಿತ್ರ ಪಕ್ಷವಾದ ಡಿಎಂಕೆ ಬಳಿ ಮೇಕೆದಾಟು ಯೋಜನೆ ಜಾರಿಗೆ ಸಹಕರಿಸುವಂತೆ ಹೈಕಮಾಂಡ್ ಮೂಲಕ ಮನವೊಲಿಸುವ ಧೈರ್ಯವಿಲ್ಲವೇ ಎಂದು ರಾಜ್ಯ ಕಾಂಗ್ರೆಸ್ ನಾಯಕ ವಿರುದ್ಧ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತೀವ್ರ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುಧಾಕರ್, ಕರ್ನಾಟಕದ ಜನರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದ್ದರೂ ರಾಜ್ಯದಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಪಕ್ಷ ಕನ್ನಡಿಗರಿಗೆ ದ್ರೋಹ ಎಸಗುತ್ತಿದೆ.
ಪಾದಯಾತ್ರೆಯ ಬೀದಿನಾಟಕ ಮಾಡಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಿಗೆ ತಮ್ಮ ಮಿತ್ರ ಪಕ್ಷವಾದ ಡಿಎಂಕೆ ಬಳಿ ಮೇಕೆದಾಟು ಯೋಜನೆ ಜಾರಿಗೆ ಸಹಕರಿಸುವಂತೆ ಹೈಕಮಾಂಡ್ ಮೂಲಕ ಮನವೊಲಿಸುವ ಧೈರ್ಯವಿಲ್ಲವೇ? ಅಥವಾ ಕನ್ನಡಿಗರ ಪರವಾಗಿ ಧ್ವನಿ ಎತ್ತುವ ಮನಸ್ಸಿಲ್ಲವೇ?
2/3 pic.twitter.com/3fWbW0Is8F
— Dr Sudhakar K (@mla_sudhakar) March 22, 2022
ಪಾದಯಾತ್ರೆಯ ಬೀದಿನಾಟಕ ಮಾಡಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಿಗೆ ತಮ್ಮ ಮಿತ್ರ ಪಕ್ಷವಾದ ಡಿಎಂಕೆ ಬಳಿ ಮೇಕೆದಾಟು ಯೋಜನೆ ಜಾರಿಗೆ ಸಹಕರಿಸುವಂತೆ ಹೈಕಮಾಂಡ್ ಮೂಲಕ ಮನವೊಲಿಸುವ ಧೈರ್ಯವಿಲ್ಲವೇ? ಅಥವಾ ಕನ್ನಡಿಗರ ಪರವಾಗಿ ಧ್ವನಿ ಎತ್ತುವ ಮನಸ್ಸಿಲ್ಲವೇ?
ಅಧಿಕಾರದ ದುರಾಸೆಯಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನೆಪವೊಡ್ಡಿ. ಮೈತ್ರಿ ಮಾಡಿಕೊಳ್ಳಲು ಹಪಹಪಿಸುವ ಪಕ್ಷಗಳು ಈಗ ಮೌನಕ್ಕೆ ಶರಣಾಗಿರುವುದು ದುರದೃಷ್ಟಕರ. ಕರ್ನಾಟಕದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವ ತನ್ನ ಮಿತ್ರ ಪಕ್ಷ ಡಿಎಂಕೆ ವಿರುದ್ಧ ಕಾಂಗ್ರೆಸ್ ನಾಯಕರು ಚೆನ್ನೈನ ಮರೀನಾ ಬೀಚಿಗೆ ಪಾದಯಾತ್ರೆ 3.0 ಕೈಗೊಳ್ಳುವರೇ ಎಂದು ಸುಧಾಕರ್ ಕುಟುಕಿದ್ದಾರೆ.karnataka health minister dr-k-sudhakar-slams congress leaders