Karnataka | ರಾಜ್ಯದ ಜ ನತೆಗೆ ಇಂದಿನಿಂದ ಪವರ್ ಸ್ಟೋಕ್ !
ಬೆಂಗಳೂರು : ನವರಾತ್ರಿ ಹಬ್ಬಕ್ಕೆ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದೆ.
ಕಲ್ಲಿದ್ದಲು ದರ ಹೆಚ್ಚಳದ ಕಾರಣ ನೀಡಿ ದರ ಏರಿಸಲು ಇಂಧನ ಇಲಾಖೆ ಮುಂದಾಗಿದೆ.
ಇಂದಿನಿಂದ ಅನ್ವಯವಾಗುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇಂಧನ ಹೊಂದಾಣಿಕೆ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಪ್ರತಿ ಯೂನಿಟ್ ಗೆ ಎಲ್ಲಿ ಎಷ್ಟು ಹೆಚ್ಚಳ
ಬೆಸ್ಕಾಂ – 43 ಪೈಸೆ
ಸೆಸ್ಕಾಂ – 35 ಪೈಸೆ
ಹೆಸ್ಕಾಂ – 35 ಪೈಸೆ
ಜೆಸ್ಕಾಂ – 35 ಪೈಸೆ
ಮೆಸ್ಕಾಂ – 24 ಪೈಸೆ
ಅಂದಹಾಗೆ ಈ ವರ್ಷ ಮೂರನೇ ಬಾರಿಗೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.
2022ರ ಏಪ್ರಿಲ್ ನಲ್ಲಿ ಪ್ರತಿ ಯೂನಿಟ್ ಗೆ 33 ಪೈಸೆ ಹೆಚ್ಚಳ ಮಾಡಲಾಗಿತ್ತು.
ಜೂನ್ ನಲ್ಲಿ ಪ್ರತಿ ಯೂನಿಟ್ ಗೆ 31 ಪೈಸೆ ಏರಿಕೆ ಮಾಡಲಾಗಿತ್ತು.








