ಬೆಂಗಳೂರು : ಕೊರೊನಾ ಆತಂಕದ ನಡುವೆ ಹಲವು ಮನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದೆ.
ಮೊದಲಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಗಲಿಗ ಗಣ್ಯರಿಗೆ ಸಂತಾಪ ಸೂಚಕ ಪ್ರಸ್ತಾಪ ಮಂಡಿಸಿದರು.
ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂ.ವಿ. ರಾಜಶೇಖರನ್,
ಕೋವಿಡ್ ನಿಂದ ನಿಧನರಾದ ಮಾಜಿ ಸಚಿವ ರಾಜಾ ಮದನಗೋಪಾಲ್ ನಾಯ್ಕ್,
ಮಾಜಿ ಸಚಿವ ಜಿ. ರಾಮಕೃಷ್ಣ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ್ ಗೆ ಕಲಾಪದಲ್ಲಿ ಸಂತಾಪ ಸೂಚನೆ ಮಾಡಲಾಯಿತು.
ಸದ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾರೆ.








