ಬೆಂಗಳೂರು :
ರಾಜ್ಯದ ನಾಲ್ಕು ನಗರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ. ಹುಣಸೂರು, ಚಿಕ್ಕಬಳ್ಳಾಪುರ, ಸಿಂಧಗಿ, ಸಿರಗುಪ್ಪದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ನಗರಸಭೆ ವಾರ್ಡ್ ಲೆಕ್ಕಾಚಾರದಲ್ಲಿ ಕೇಸರಿ ಪಡೆ ಘರ್ಜಿಸಿದ್ದು,ಬಿಜೆಪಿ 52, ಕಾಂಗ್ರೆಸ್ 47 ಸ್ಥಾನಗಳನ್ನ ಗೆದ್ದಿವೆ.
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು, ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ.
ಹೊಸಕೋಟೆ ನಗರಸಭೆ:

ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರೂ ಬಿಜೆಪಿ 3ರಲ್ಲಿ ಗೆಲುವು ಪಡೆದಿರುವುದು ಗಮನಾರ್ಹವೆನಿಸಿದೆ.
ಹುಣಸೂರು ನಗರಸಭೆ ಫಲಿತಾಂಶ:

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ವಾರ್ಡ್ಗಳ ಪೈಕಿ ಕಾಂಗ್ರೆಸ್ 16ರಲ್ಲಿ ಗೆದ್ದಿದ್ದರೆ, ಬಿಜೆಪಿ 9ರಲ್ಲಿ, ಜೆಡಿಎಸ್ 2ರಲ್ಲಿ, ನಾಲ್ಕರಲ್ಲಿ ಪಕ್ಷೇತರರು ಗೆದ್ದಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಸಿರಗುಪ್ಪ ನಗರಸಭೆಯಲ್ಲಿ ಕಾಂಗ್ರೆಸ್ ಗೆ ಜಯ, ತೆಕ್ಕಲಕೋಟೆ ಪಟ್ಟ ಪಂಚಾಯಿತಿ ಚುನಾವಣೆಯಲ್ಲಿ ಕಮಲ ಅರಳಿದೆ.
ಬಳ್ಳಾರಿಯ ಸಿರಗುಪ್ಪ ನಗರಸಭೆ:
ಒಟ್ಟು ವಾರ್ಡ್ 31
ಕಾಂಗ್ರೆಸ್ 16
ಬಿಜೆಪಿ 8
ಪಕ್ಷೇತರ 1
ಬಳ್ಳಾರಿಯ ತೆಕ್ಕಲಕೋಟೆ ಪ.ಪಂ.:
ಒಟ್ಟು ವಾರ್ಡ್ 20
ಬಿಜೆಪಿ 11
ಕಾಂಗ್ರೆಸ್ 9
ವಿಜಯಪುರದ ಸಿಂದಗಿ ಪುರಸಭೆ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ಕೇವಲ 6 ಸ್ಥಾನಗಳು ಪಡೆದುಕೊಂಡಿವೆ.
ವಿಜಯಪುರದ ಸಿಂಧಗಿ ಪುರಸಭೆ:
ಒಟ್ಟು ವಾರ್ಡ್ 23
ಕಾಂಗ್ರೆಸ್ 11
ಜೆಡಿಎಸ್ 6
ಬಿಜೆಪಿ 3
ಪಕ್ಷೇತರರು 3

ಉಪಚುನಾವಣೆಯ ಫಲಿತಾಂಶ :
ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಬಿ.ವಿ ರವೀಂದ್ರ ನಾಯಕ್ 103 ಮತಗಳಿಂದ ಗೆಲುವು ಪಡೆದಿದ್ದಾರೆ. ಬಳ್ಳಾರಿಯ ಕರೂರು ತಾ.ಪಂ. ಉಪಚುನಾವಣೆಯಲ್ಲಿ ಬಿಜೆಪಿಯ ವಿ. ಅಮರಮ್ಮ, ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ತಾ.ಪಂ. ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಕೋಡಿಹಳ್ಳಿ ಮಂಜುನಾಥ್, ಹಾನಗಲ್ ತಾಲೂಕಿನ ತಿಳವಳ್ಳಿ ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ನ ಫಯಾಜ್ ಅಹ್ಮದ್ ಲೋಹಾರ್ ಗೆಲುವು ದಾಖಲಿಸಿದ್ದಾರೆ.








