Karnataka Police | ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರಿಗೆ ಪೊಲೀಸ್ ಶಾಕ್
ಬೆಂಗಳೂರು : ರಾಜ್ಯಾದ್ಯಂತ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ರಾಜ್ಯಾದ್ಯಂತ ಕರ್ನಾಟಕ ಪೊಲೀಸರು ದಾಳಿ ನಡೆಸಿ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಮನಗರ, ಮಂಗಳೂರು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮೀಣ, ಕೋಲಾರ, ಮೈಸೂರು, ಚಾಮರಾಜನಗರದಲ್ಲಿ ದಾಳಿ ನಡೆಸಲಾಗಿದೆ.
ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮತ್ತು ಆಯಾ ಜಿಲ್ಲೆಗಳ ಎಸ್ ಪಿ ಹಾಗೂ ಕಮಿಷರ್ ಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ಸದ್ಯ ಪೊಲೀಸರು ವಶಕ್ಕೆ ಪಡೆದವರು ಪಿಎಫ್ ಐ ಪತ್ರಿಭಟನೆ ಹಾಗೂ ಪಿಎಫ್ ಐಗೆ ಸೇರಿದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು.
ಜೊತೆಗೆ ಫಂಡಿಂಗ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಬೀದರ್ ನಲ್ಲಿ ಪಿಎಫ್ ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ, ಶೇಕ್ ಮಕ್ಸೂದ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗಲಕೋಟೆಯಲ್ಲಿ ಆರು ಪಿಎಫ್ ಐ ಕಾರ್ಯಕರ್ತರು, ಚಾಮರಾಜನಗರದಲ್ಲಿ ಪಿಎಫ್ ಐ ಜಿಲ್ಲಾಧ್ಯಕ್ಷ ಕಪಿಲ್ ಅವರನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.








